ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ‘ಭಾಯ್ಜಾನ್’ ಸಲ್ಮಾನ್ ಖಾನ್ ಅಂದ್ರೆ ಸಾಕು, ಒಂದಲ್ಲಾ ಒಂದು ವಿಚಾರಕ್ಕೆ ಲೈಮ್‌ಲೈಟ್‌ನಲ್ಲಿರುತ್ತಾರೆ. ಇದೀಗ ತಮ್ಮ ವೈಯಕ್ತಿಕ ಜೀವನದ ಅತಿ ದೊಡ್ಡ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ.
ಕಳೆದ 25 ವರ್ಷಗಳಿಂದ ಅವರು ಡಿನ್ನರ್‌ಗೆ ಅಂತ ಹೋಟೆಲ್‌ಗಾಗಲಿ ಅಥವಾ ರೆಸ್ಟೋರೆಂಟ್‌ಗಾಗಲಿ ಹೋಗೇ ಇಲ್ಲವಂತೆ!
ಹೌದು, ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಪ್ರತಿಷ್ಠಿತ ‘ರೆಡ್ ಸೀ ಫಿಲ್ಮ್ ಫೆಸ್ಟಿವಲ್’ನಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್, ಅಲ್ಲಿ ನೆರೆದಿದ್ದವರ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ದಿನಚರಿ ಮತ್ತು ಜೀವನಶೈಲಿಯ ಬಗ್ಗೆ ಮಾತನಾಡುತ್ತಾ, “ನನ್ನ ಜೀವನ ಅಂದ್ರೆ ಬರೀ ಶೂಟಿಂಗ್ ಮತ್ತು ಮನೆ ಅಷ್ಟೇ” ಎಂದು ಹೇಳಿಕೊಂಡಿದ್ದಾರೆ.
ಕಳೆದ 25 ರಿಂದ 26 ವರ್ಷಗಳಾಗಿವೆ, ನಾನು ಡಿನ್ನರ್‌ಗಾಗಿ ಎಲ್ಲೂ ಹೊರಗಡೆ ಹೋಗಿಲ್ಲ. ನನ್ನ ದಿನಚರಿ ಹೇಗಿದೆ ಎಂದರೆ, ಮನೆಯಿಂದ ಶೂಟಿಂಗ್ ಸೆಟ್‌ಗೆ ಹೋಗುವುದು, ಶೂಟಿಂಗ್ ಮುಗಿಸಿ ಮನೆಗೆ ಬರುವುದು. ಒಂದು ವೇಳೆ ಶೂಟಿಂಗ್ ಬೇರೆ ಊರಿನಲ್ಲಿದ್ದರೆ, ಮನೆಯಿಂದ ಏರ್‌ಪೋರ್ಟ್‌ಗೆ, ಏರ್‌ಪೋರ್ಟ್‌ನಿಂದ ಹೋಟೆಲ್‌ಗೆ ಮತ್ತು ಹೋಟೆಲ್‌ನಿಂದ ಈವೆಂಟ್ ಅಥವಾ ಶೂಟಿಂಗ್ ಸ್ಪಾಟ್‌ಗೆ. ಇದೇ ನನ್ನ ಜೀವನ. ಇದರಾಚೆಗೆ ನಾನು ಎಲ್ಲಿಯೂ ಸುತ್ತಾಡುವುದಿಲ್ಲ” ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇನ್ನು ತಮ್ಮ ಸ್ನೇಹಿತರು ಮತ್ತು ಆಪ್ತರ ಬಗ್ಗೆಯೂ ಸಲ್ಮಾನ್ ಮಾತನಾಡಿದ್ದಾರೆ. ನನ್ನ ಜೀವನದುದ್ದಕ್ಕೂ ನಾನು ಕುಟುಂಬ ಮತ್ತು ಸ್ನೇಹಿತರ ಜೊತೆಯೇ ಇದ್ದೇನೆ. ಆದರೆ ಅದರಲ್ಲಿ ಸಾಕಷ್ಟು ಜನ ನನ್ನ ಲೈಫ್‌ನಿಂದ ಹೋಗಿದ್ದಾರೆ. ಈಗ ನನ್ನ ಜೊತೆ ಇರುವುದು ಕೇವಲ 4 ರಿಂದ 5 ಜನ ಮಾತ್ರ. ಇವರು ಬಹಳ ವರ್ಷಗಳಿಂದ ನನ್ನ ಜೊತೆಗಿದ್ದಾರೆ ಎಂದು ತಮ್ಮ ಇನ್ನರ್ ಸರ್ಕಲ್ ಬಗ್ಗೆ ಹೇಳಿಕೊಂಡಿದ್ದಾರೆ.
ನನಗೆ ಹೊರಗಡೆ ಮುಕ್ತವಾಗಿ ಸುತ್ತಾಡಲು ಆಗುವುದಿಲ್ಲ ಎಂಬ ಬೇಸರವಿಲ್ಲ. ಜನ ನಮಗೆ ಇಷ್ಟೊಂದು ಗೌರವ ಮತ್ತು ಪ್ರೀತಿಯನ್ನು ಕೊಡುತ್ತಾರೆ. ಅದಕ್ಕಾಗಿಯೇ ನಾನು ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತೇನೆ. ಕೆಲವೊಮ್ಮೆ ನಾನು ಸ್ವಲ್ಪ ಸೋಮಾರಿ ಆಗುತ್ತೇನೆ , ಆದರೆ ಈ ಸ್ಟಾರ್‌ಡಮ್ ಮತ್ತು ಅಭಿಮಾನಿಗಳ ಪ್ರೀತಿಯನ್ನು ನಾನು ಎಂಜಾಯ್ ಮಾಡುತ್ತೇನೆ” ಎಂದು ಹೇಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

