January18, 2026
Sunday, January 18, 2026
spot_img

ಕಾಂಗ್ರೆಸ್-ಆರ್​​ಜೆಡಿಯಿಂದ ನನ್ನ ತಾಯಿಗೆ ಅವಮಾನ: ಬಿಹಾರದಲ್ಲಿ ಭಾವುಕರಾದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯಾ ಬಣದ ಪ್ರಚಾರದ ವೇದಿಕೆಯಲ್ಲಿ ನನ್ನ ಮೃತ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದು ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ಅವಮಾನಿಸಿದೆ ಎಂದು ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕರಾದರು.

ಬಿಹಾರದಲ್ಲಿ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ-ಕಾಂಗ್ರೆಸ್ ಪ್ರಚಾರ ವೇದಿಕೆಯಲ್ಲಿ ನನ್ನ ತಾಯಿಗೆ ಅವಾಚ್ಯ ಶಬ್ದ ಬಳಸಿ ನಿಂದಿಸಲಾಗಿದೆ . ನನ್ನ ತಾಯಿಯನ್ನು ಮಾತ್ರ ಅವಮಾನಿಸಿಲ್ಲ, ಭಾರತದ ಪ್ರತಿಯೊಬ್ಬ ತಾಯಿ ಮತ್ತು ಅಕ್ಕ- ತಂಗಿಯರನ್ನು ಅವಮಾನಿಸಿದ್ದಾರೆ. ಇದನ್ನು ಕೇಳಿದ ನಂತರ ನೀವು ಕೂಡಾ ನನ್ನಷ್ಟೇ ನೋವು ಅನುಭವಿಸಿದ್ದೀರಿ ಎಂದು ನನಗೆ ತಿಳಿದಿದೆ ಎಂದು ಮೋದಿ ಭಾವುಕರಾಗಿದ್ದಾರೆ.

ಈ ದೌರ್ಜನ್ಯಗಳು ನನ್ನ ತಾಯಿಗೆ ಮಾತ್ರ ಅವಮಾನವಲ್ಲ. ಇದು ದೇಶದ ತಾಯಂದಿರಗೆ ಮಾಡಿದ ಅವಮಾನ. ನನ್ನ ತಾಯಿಯಂತಹ ಅನೇಕ ಮಹಿಳೆಯರು ಬಡತನದ ವಿರುದ್ಧ ತನ್ನನ್ನು ಮತ್ತು ತನ್ನ ಒಡಹುಟ್ಟಿದವರನ್ನು ಸಾಕಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಅನಾರೋಗ್ಯ ಇದ್ದರೂ ಕೆಲಸ ಮಾಡಿ, ಪ್ರತಿಯೊಂದು ಪೈಸೆಯನ್ನು ಕೂಡಿಟ್ಟು ನಮಗೆ ಬಟ್ಟೆ ಕೊಡಿಸುತ್ತಿದ್ದರು. ನಮ್ಮ ದೇಶದಲ್ಲಿ ಅಂತಹ ಕೋಟಿ ಕೋಟಿ ತಾಯಂದಿರಿದ್ದಾರೆ. ದೇವರು ಮತ್ತು ದೇವತೆಗಳಿಗಿಂತ ತಾಯಿಯ ಸ್ಥಾನವು ಉನ್ನತವಾಗಿದೆ ಎಂದು ಅವರು ಹೇಳಿದರು.

ಶ್ರೀಮಂತರ ಕುಟುಂಬದಲ್ಲಿ ಹುಟ್ಟಿದವರಿಗೆ ಬಡ ತಾಯಿಯ ನೋವು ಎಂದಿಗೂ ಕಾಣುವುದಿಲ್ಲ. ಅವರೆಲ್ಲ ಚಿನ್ನ, ಬೆಳ್ಳಿ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾರೆ. ಬಿಹಾರದಲ್ಲಿ ತಮ್ಮ ಕುಟುಂಬವೇ ಅಧಿಕಾರದಲ್ಲಿ ಇರಬೇಕು ಅಂದುಕೊಂಡಿದ್ದಾರೆ. ಆದರೆ ದುರ್ಬಲ ಮಹಿಳೆಯೊಬ್ಬರ ಮಗನನ್ನು ನೀವು ಪ್ರಧಾನಿಯನ್ನಾಗಿ ಮಾಡಿದ್ದೀರಿ. ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂದು ನನಗೆ ತಿಳಿದಿದೆ ಎಂದು ಅವರು ಹೇಳಿದರು.

Must Read

error: Content is protected !!