January20, 2026
Tuesday, January 20, 2026
spot_img

ನನ್ನ ಮಗನ ಹೆಸರು ಶೇಖರ್…ಭಾರತದ ಜೊತೆಗಿನ ನಂಟು ಬಿಚ್ಚಿಟ್ಟ ಟೆಸ್ಲಾ ಮಾಲೀಕ ಎಲಾನ್ ಮಸ್ಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಯೂಟ್ಯೂಬ್ ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಾ ಭಾರತದ ಬಗ್ಗೆ ಮತ್ತೊಮ್ಮೆ ವಿಶೇಷ ಒಲವು ತೋರಿದ್ದಾರೆ.

ಝಿರೋದಾ ಸಹ-ಸ್ಥಾಪಕ ನಿಖಿಲ್ ಕಾಮತ್ ನಡೆಸಿಕೊಡುವ ಜನಪ್ರಿಯ ಪಾಡ್‌ಕ್ಯಾಸ್ಟ್ ‘ಪೀಪಲ್ ಬೈ ಡಬ್ಲ್ಯೂಟಿಎಫ್’ ನಲ್ಲಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಮತ್ತು ಅಮೆರಿಕದ ಪ್ರಗತಿಯಲ್ಲಿ ಭಾರತದ ನಂಟನ್ನು ಬಿಚ್ಚಿಟ್ಟಿದ್ದಾರೆ.

ಇಲಾನ್ ಮಸ್ಕ್ ಅವರು ತಮ್ಮ ಒಬ್ಬ ಮಗನ ಹೆಸರು ಹಾಗೂ ಆ ಮಗನ ತಾಯಿಯ ಪರಿಚಯವನ್ನು ಮಾಡಿಸಿದ್ದಾರೆ. ಇಲಾನ್ ಮಸ್ಕ್ ಅವರಿಗೆ ಹಲವು ಮಕ್ಕಳಿದ್ಧಾರೆ. ಅವರಲ್ಲಿ ಶೇಖರ್ ಒಬ್ಬ. ಈ ವಿಚಾರವನ್ನು ಮಸ್ಕ್ ಹಂಚಿಕೊಂಡಿದ್ದಾರೆ.

ಈ ವಿಷಯ ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಪಾರ್ಟ್ನರ್ ಶಿವೋನ್ ಜಿಲಿಸ್ ಅರ್ಧ ಭಾರತೀಯೆ. ಅವಳಿಂದ ಪಡೆದ ಮಕ್ಕಳಲ್ಲಿ ಒಬ್ಬನ ಮಧ್ಯ ನಾಮ ಶೇಖರ್ ಎಂದಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತ ಮೂಲದ ವಿಜ್ಞಾನಿಯೂ ಮತ್ತು ನೊಬೆಲ್ ಪುರಸ್ಕೃತರೂ ಆಗಿದ್ದ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರ ಹೆಸರಿನ ಒಂದು ಭಾಗವನ್ನು ಇಲಾನ್ ಮಸ್ಕ್ ತಮ್ಮ ಒಬ್ಬ ಮಗನಿಗೆ ಇಟ್ಟಿದ್ದಾರೆ. ಶೇಖರ್ ತಾಯಿ ಹಾಗೂ ಇಲಾನ್ ಮಸ್ಕ್ ಅವರ ಪಾರ್ಟ್ನರ್ ಆಗಿರುವ ಶಿವೋನ್ ಜಿಲಿಸ್ ಅವರು ಕೆನಡಾದಲ್ಲಿ ಬೆಳೆದವರು. ಅವರ ತಂದೆ ಭಾರತೀಯ ಮೂಲದವರೆನ್ನಲಾಗಿದೆ. ತನ್ನ ಪಾರ್ಟ್ನರ್ ಕೆನಡಾದಲ್ಲಿ ಓದಿ ಬೆಳೆದದ್ದು ಎಂಬುದು ಬಿಟ್ಟರೆ ಹೆಚ್ಚಿನ ಮಾಹಿತಿ ಇಲಾನ್ ಮಸ್ಕ್ ಅವರಿಗೂ ಇದ್ದಂತಿಲ್ಲ.

ಶಿವೋನ್ ಜಿಲಿಸ್ ಕೆನಡಾದ ಒಂಟಾರಿಯೊದಲ್ಲಿ ಬೆಳೆದವರು. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅವರು, 2017ರಲ್ಲಿ ನ್ಯೂರಾಲಿಂಕ್ ಕಂಪನಿಗೆ ಸೇರಿದರು ಮತ್ತು ಪ್ರಸ್ತುತ ಆಪರೇಷನ್ಸ್ ಮತ್ತು ಸ್ಪೆಷಲ್ ಪ್ರಾಜೆಕ್ಟ್ಸ್ ವಿಭಾಗದ ನಿರ್ದೇಶಕರಾಗಿದ್ದಾರೆ.

ಅವರ ಭಾರತೀಯ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಸ್ಕ್, “ಶಿವೋನ್ ಕೆನಡಾದಲ್ಲಿ ಬೆಳೆದರು. ಅವರು ಮಗುವಾಗಿದ್ದಾಗಲೇ ದತ್ತು ನೀಡಲಾಗಿತ್ತು. ಅವರ ತಂದೆ ವಿಶ್ವವಿದ್ಯಾಲಯದಲ್ಲಿ ಎಕ್ಸ್‌ಚೇಂಜ್ ವಿದ್ಯಾರ್ಥಿಯಾಗಿದ್ದಿರಬಹುದು ಎಂದು ಭಾವಿಸುತ್ತೇನೆ. ನನಗೆ ಪೂರ್ತಿ ವಿವರಗಳು ತಿಳಿದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಶಿವೋನ್ ಮತ್ತು ಮಸ್ಕ್ ಅವರಿಗೆ 2021ರಲ್ಲಿ ಅವಳಿ ಮಕ್ಕಳು (ಸ್ಟ್ರೈಡರ್ ಮತ್ತು ಅಜುರೆ) ಜನಿಸಿದ್ದು, ಇತ್ತೀಚೆಗೆ ಸೆಲ್ಡನ್ ಲೈಕರ್ಗಸ್ ಎಂಬ ಮತ್ತೊಂದು ಮಗು ಜನಿಸಿರುವುದು ವರದಿಯಾಗಿದೆ.

Must Read