ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭೆ ಚುನಾವಣೆ 2ನೇ ಹಂತದ ಮತದಾನಕ್ಕೆ ದಿನಗಣನೆ ಆಶುರುವಾಗಿದ್ದು, ಈ ನಡುವೆ ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲ ಅಚಲ’ ಎಂದು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಘೋಷಣೆ ಮಾಡಿದ್ದಾರೆ.
ಸಂದರ್ಶನ ಸಮಯದಲ್ಲಿ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ,ನಾನು ಅವರನ್ನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ.. ಅವರು ಬೇರ್ಪಡಿಸಲಾಗದವರು ಎಂದು ಹೇಳಿದರು.
ಈ ವೇಳೆ ಬಿಹಾರ ಚುನಾವಣೆಯ ನಂತರ ಚುನಾವಣೋತ್ತರ ಮೈತ್ರಿಯ ಕಲ್ಪನೆಯನ್ನು ತಳ್ಳಿಹಾಕಿದ ಅವರು, ‘ನಾವು “ಎಲ್ಲಿಯೂ ಹೋಗುವುದಿಲ್ಲ” ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಭಾಗವಾಗಿ ಉಳಿಯುತ್ತೇವೆ’ ಎಂದು ಹೇಳಿದರು.
ಇದೇ ವೇಳೆ 2002 ರಲ್ಲಿ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸೋನಿಯಾ ಗಾಂಧಿ ಸಂಪರ್ಕಿಸಿದ ರೀತಿಯಲ್ಲಿಯೇ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರೋಧ ಪಕ್ಷಕ್ಕೆ ಸೇರಲು ನಿಮ್ಮನ್ನು ಸಂಪರ್ಕಿಸಬಹುದೇ ಎಂದು ಕೇಳಿದಾಗ, ಇದಕ್ಕೆ ಉತ್ತರಿಸಿದ ಪಾಸ್ವಾನ್ ಅವರು ‘ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಂವಹನ ನಡೆಸುತ್ತಿದ್ದರೂ, ನಾನು ಪ್ರಿಯಾಂಕಾ ಜಿ ಅವರೊಂದಿಗೆ ಮಾತನಾಡುತ್ತೇನೆ. ಆದರೆ ನನ್ನ ಪ್ರಧಾನಿ ಇರುವವರೆಗೆ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ನಾನು ಮತ್ತೊಮ್ಮೆ ಒತ್ತಿ ಹೇಳಲು ಬಯಸುತ್ತೇನೆ ಎಂದರು.
ನನ್ನ ಸಮರ್ಪಣೆ ಮತ್ತು ನನ್ನ ಪ್ರೀತಿ ಅವರಿಗೇ ಉಳಿಯುತ್ತದೆ. ನಾನು ಅವರನ್ನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇನೆ. ಅವರಿಗೆ ನನ್ನ ಬೆಂಬಲ ಅಚಲವಾಗಿರುತ್ತದೆ ಎಂದರು.

