ಇಂದಿನ ದಿನಗಳಲ್ಲಿ ಅನೇಕ ಯುವತಿಯರು ಮತ್ತು ಮಹಿಳೆಯರು ಕಾಲಿಗೆ ಕಪ್ಪು ದಾರವನ್ನು ಧರಿಸುವುದನ್ನು ನಾವು ನೋಡುತ್ತೇವೆ. ಹೆಚ್ಚಿನವರು ಇದನ್ನು ಕೇವಲ ಒಂದು ‘ಫ್ಯಾಷನ್’ ಎಂದು ಭಾವಿಸುತ್ತಾರೆ. ಆದರೆ, ಶಾಸ್ತ್ರಗಳ ಪ್ರಕಾರ ಮತ್ತು ಹಿರಿಯರ ನಂಬಿಕೆಯಂತೆ ಎಡಗಾಲಿಗೆ ಕಪ್ಪು ದಾರ ಧರಿಸುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕವಾಗಿ ಹಲವಾರು ಲಾಭಗಳಿವೆ.
ಯಾವೆಲ್ಲಾ ಲಾಭಗಳಿವೆ?
ದೃಷ್ಟಿ ದೋಷದಿಂದ ಮುಕ್ತಿ: ಜನರ ಕೆಟ್ಟ ದೃಷ್ಟಿ ಅಥವಾ ‘ನಜರ್’ ತಗುಲದಂತೆ ಈ ಕಪ್ಪು ದಾರವು ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಂಬಲಾಗಿದೆ.
ನಕಾರಾತ್ಮಕ ಶಕ್ತಿಯ ನಿವಾರಣೆ: ನಮ್ಮ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳು ದೇಹವನ್ನು ಪ್ರವೇಶಿಸದಂತೆ ತಡೆಯಲು ಕಪ್ಪು ದಾರ ಸಹಕಾರಿ.
ಆರೋಗ್ಯದ ದೃಷ್ಟಿಯಿಂದ: ಕಾಲಿನ ನೋವು ಅಥವಾ ಪಾದದ ಸಮಸ್ಯೆ ಇರುವವರಿಗೆ ಕಪ್ಪು ದಾರ ಧರಿಸುವುದರಿಂದ ನೋವು ಶಮನವಾಗುತ್ತದೆ ಎಂಬ ನಂಬಿಕೆಯಿದೆ. ಇದು ರಕ್ತ ಸಂಚಲನಕ್ಕೂ ಪೂರಕ ಎನ್ನಲಾಗುತ್ತದೆ.
ಶನಿ ದೋಷದ ಪ್ರಭಾವ ಕಡಿಮೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣವು ಶನಿ ದೇವನಿಗೆ ಪ್ರಿಯವಾದುದು. ಎಡಗಾಲಿಗೆ ದಾರ ಕಟ್ಟುವುದರಿಂದ ಶನಿ ದೋಷದ ಪ್ರಭಾವ ತಗ್ಗುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ.
ಹಣಕಾಸಿನ ವೃದ್ಧಿ: ಶನಿ ದೇವನ ಕೃಪೆಯಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.
ಕಪ್ಪು ದಾರವನ್ನು ಕಟ್ಟುವಾಗ ಮಂಗಳವಾರ ಅಥವಾ ಶನಿವಾರದಂದು ದೇವಸ್ಥಾನದಲ್ಲಿ ಪೂಜೆ ಮಾಡಿಸಿದ ದಾರವನ್ನು ಧರಿಸುವುದು ಹೆಚ್ಚಿನ ಫಲ ನೀಡುತ್ತದೆ ಎಂಬುದು ಭಕ್ತರ ನಂಬಿಕೆ.

