January19, 2026
Monday, January 19, 2026
spot_img

Nail Biting | ಉಗುರು ಕಚ್ಚುವ ಅಭ್ಯಾಸ ನಿಮಗೂ ಇದ್ಯಾ? ಹುಷಾರ್… ಇವತ್ತೇ ನಿಲ್ಲಿಸಿಬಿಡಿ

ಬಹುತೇಕ ಜನರು ಒತ್ತಡ, ಚಡಪಡಿಕೆ ಅಥವಾ ಆತಂಕದಲ್ಲಿರುವಾಗ ತಿಳಿದೋ ತಿಳಿಯದೆಯೋ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಕೆಲವರಿಗೆ ಇದು ತಾತ್ಕಾಲಿಕ ಸಮಾಧಾನ ನೀಡಿದರೂ, ದೀರ್ಘಾವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಈ ಅಭ್ಯಾಸವನ್ನು ಸಾಮಾನ್ಯವೆಂದು ಭಾವಿಸಬಾರದು, ಏಕೆಂದರೆ ಇದು ಹಲವಾರು ಗಂಭೀರ ಸಮಸ್ಯೆಗಳ ಮೂಲವಾಗಬಹುದು.

ನಿರಂತರವಾಗಿ ಉಗುರುಗಳನ್ನು ಕಚ್ಚುವುದರಿಂದ ಉಗುರುಗಳ ಸ್ವಾಭಾವಿಕ ರಚನೆ ಹಾಳಾಗುತ್ತದೆ. ಉಗುರುಗಳು ಒಡೆಯಲು ಆರಂಭವಾಗುತ್ತವೆ ಮತ್ತು ಬಲಹೀನವಾಗುತ್ತವೆ. ಕಾಲಕ್ರಮೇಣ ಉಗುರುಗಳು ತಮ್ಮ ಮೂಲ ರೂಪ ಕಳೆದುಕೊಳ್ಳಬಹುದು.

ಹಲ್ಲು ಮತ್ತು ಬಾಯಿಯ ಸಮಸ್ಯೆಗಳು
ಉಗುರುಗಳನ್ನು ಕಚ್ಚುವುದರಿಂದ ಹಲ್ಲುಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಹಲ್ಲುಗಳಲ್ಲಿ ಬಿರುಕು, ಒಸಡುಗಳಿಗೆ ಗಾಯ ಅಥವಾ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಬಾಯಿಯ ಸ್ವಚ್ಛತೆಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ.

ಜೀರ್ಣಾಂಗದ ಮೇಲೆ ಪರಿಣಾಮ
ಉಗುರುಗಳ ಸುತ್ತಲಿನ ಧೂಳು ಮತ್ತು ಬ್ಯಾಕ್ಟೀರಿಯಾಗಳು ಬಾಯಿಯಿಂದ ದೇಹಕ್ಕೆ ಪ್ರವೇಶಿಸುತ್ತವೆ. ಇದು ಜೀರ್ಣಾಂಗಕ್ಕೆ ತೊಂದರೆ ನೀಡಬಹುದು. ಉಗುರು ಕಚ್ಚುವುದರಿಂದ ಹೊಟ್ಟೆ ನೋವು, ಅಜೀರ್ಣ, ಮತ್ತು ಸೋಂಕುಗಳ ಅಪಾಯ ಹೆಚ್ಚಾಗುತ್ತದೆ.

ಸಾಂಕ್ರಾಮಿಕ ರೋಗಗಳ ಅಪಾಯ
ಉಗುರುಗಳಲ್ಲಿ ಇರುವ ಮಲಿನಗಳು ಬಾಯಿಗೆ ಸೇರಿ ಶೀತ, ಜ್ವರ ಹಾಗೂ ಇತರ ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡಬಹುದು. ದೀರ್ಘಾವಧಿಯಲ್ಲಿ ಕರುಳಿನ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಉಗುರು ಕಚ್ಚುವಿಕೆ ಸಾಮಾನ್ಯ ಅಭ್ಯಾಸವೆಂದು ತೋರುವುದಾದರೂ, ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲದು. ಸ್ವಯಂ ನಿಯಂತ್ರಣ, ಮನಸ್ಸಿನ ಶಾಂತಿಗಾಗಿ ಆರೋಗ್ಯಕರ ವಿಧಾನಗಳನ್ನು ಅನುಸರಿಸುವುದು, ಹಾಗೂ ಒತ್ತಡವನ್ನು ನಿಭಾಯಿಸಲು ಬೇರೆ ಮಾರ್ಗಗಳನ್ನು ಹುಡುಕುವುದು ಸೂಕ್ತ.

Must Read

error: Content is protected !!