Monday, January 5, 2026

ನಮ್ರತಾ-ಕಾರ್ತಿಕ್‌ ಒಳ್ಳೆ ಜೋಡಿ, ಮದುವೆ ಆದ್ರೆ ಫುಲ್‌ ಖುಷಿ ಪಡ್ತೀನಿ ಎಂದ ಸಂಗೀತಾ ಶೃಂಗೇರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ನಲ್ಲಿ ಕಾರ್ತಿಕ್‌-ಸಂಗೀತಾ ಕಪಲ್‌ನಂತೆ ಕಾಣಿಸಿಕೊಂಡಿದ್ದರು. ಸೀಸನ್‌ನ ಸೆಕೆಂಡ್‌ ಹಾಫ್‌ನಲ್ಲಿ ಕಾರ್ತಿಕ್‌ ನಮ್ರತಾ ಜತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದಾಗಿ ಎಲ್ಲರೂ ಇದನ್ನು ಲವ್‌ ಟ್ರಯಾಂಗಲ್‌ ಎಂದು ಎಲ್ಲರೂ ತಮಾಷೆ ಮಾಡುತ್ತಿದ್ದರು.

ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಒಟ್ಟಾಗಿ ದೇಶ-ವಿದೇಶ ಸುತ್ತುತ್ತಿದ್ದಾರೆ ಎಂಬ ಅನುಮಾನ ಅನೇಕರಿಗೆ ಇದೆ. ಇತ್ತೀಚೆಗೆ ನಮ್ರತಾ ಹಂಚಿಕೊಂಡ ವಿಡಿಯೋದಲ್ಲಿ ಕಾರ್ತಿಕ್ ಮಹೇಶ್ ಅವರ ಕೈ ಕಾಣಿಸಿದೆ. ಹೀಗಾಗಿ ಸುತ್ತಾಟದಲ್ಲಿ ನಮ್ರತಾಗೆ ಅವರು ಪಾರ್ಟ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ. ಅವರು ಮದುವೆ ಆಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಈ ಬಗ್ಗೆ ಸಂಗೀತಾ ರಿಯಾಕ್ಟ್ ಮಾಡಿದ್ದಾರೆ.

ಈ ಬೆನ್ನಲ್ಲೇ ಇದೀಗ ಸಂಗೀತಾ ಕಾರ್ತಿಕ್‌-ನಮ್ರತಾ ಬಗ್ಗೆ ಮಾತನಾಡಿದ್ದಾರೆ. ಇವರಿಬ್ಬರು ಮದುವೆಯಾದ್ರೆ ನನಗೆ ಖುಷಿ ಎಂದು ಹೇಳಿ ರೂಮರ್ಸ್‌ಗೆ ಫುಲ್‌ಸ್ಟಾಪ್‌ ಹಾಕಿದ್ದಾರೆ.

error: Content is protected !!