February 3, 2026
Tuesday, February 3, 2026
spot_img

National Voters Day | ಒಂದು ಮತ, ಒಂದು ಬದಲಾವಣೆ: ದೇಶದ ಅಸಲಿ ಶಕ್ತಿ ಅಡಗಿರೋದೇ ಮತದಾರರಲ್ಲಿ!

ಜನತಂತ್ರದ ಅಸಲಿ ಶಕ್ತಿ ಬ್ಯಾಲೆಟ್ ಬಾಕ್ಸ್‌ನೊಳಗೆ ಮೌನವಾಗಿ ಅಡಗಿರುತ್ತದೆ. ಒಂದು ಮತ, ಒಂದು ನಿರ್ಧಾರ, ಒಂದು ಭವಿಷ್ಯ ಈ ತತ್ವವನ್ನು ಪ್ರತಿಯೊಬ್ಬ ನಾಗರಿಕನಿಗೂ ನೆನಪಿಸಿಸುವ ಉದ್ದೇಶದಿಂದಲೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಮತದಾನ ಎಂಬುದು ಕೇವಲ ಹಕ್ಕು ಮಾತ್ರವಲ್ಲ, ಅದು ಸಮಾಜದ ಹೊಣೆಗಾರಿಕೆಯ ಪ್ರತಿಬಿಂಬವೂ ಹೌದು. ಈ ಕಾರಣಕ್ಕೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿ ದೇಶವ್ಯಾಪಿಯಾಗಿ ಜನರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ದಿನವನ್ನು ಆಚರಣೆಗೆ ತರಲಾಗಿದೆ.

ರಾಷ್ಟ್ರೀಯ ಮತದಾರರ ದಿನದ ಇತಿಹಾಸ
ಭಾರತೀಯ ಚುನಾವಣಾ ಆಯೋಗವು ತನ್ನ ಸ್ಥಾಪನೆಯ ದಿನವನ್ನು ಸ್ಮರಿಸುವ ಉದ್ದೇಶದಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ಮುಂದಾಯಿತು. 1950ರ ಜನವರಿ 25ರಂದು ಭಾರತೀಯ ಚುನಾವಣಾ ಆಯೋಗ ಸ್ಥಾಪನೆಯಾಯಿತು. ಈ ಐತಿಹಾಸಿಕ ದಿನದ ಸ್ಮರಣಾರ್ಥವಾಗಿ 2011ರಿಂದ ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಯುವ ಮತದಾರರನ್ನು ಮತದಾನ ಪ್ರಕ್ರಿಯೆಗೆ ಸೆಳೆಯುವುದು ಇದರ ಪ್ರಮುಖ ಗುರಿಯಾಗಿದೆ.

ಮತದಾರರ ದಿನದ ಮಹತ್ವ
ರಾಷ್ಟ್ರೀಯ ಮತದಾರರ ದಿನವು ಮತದಾನದ ಮಹತ್ವವನ್ನು ಜನರಿಗೆ ಅರಿವು ಮಾಡಿಕೊಡುತ್ತದೆ. ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುವ ಯುವಜನರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸುತ್ತದೆ. ಸ್ವತಂತ್ರ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಯ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕೆಲಸವೂ ಈ ದಿನದ ಮೂಲಕ ನಡೆಯುತ್ತದೆ.

ದೇಶದ ಭವಿಷ್ಯ ರೂಪುಗೊಳ್ಳುವಲ್ಲಿ ಯುವ ಮತದಾರರ ಪಾತ್ರ ಅತ್ಯಂತ ಮಹತ್ವದ್ದು. ತಮ್ಮ ಮತದ ಮೂಲಕ ಆಡಳಿತದ ದಿಕ್ಕು ನಿರ್ಧರಿಸಬಹುದೆಂಬ ಅರಿವು ಯುವಜನರಲ್ಲಿ ಮೂಡಿಸುವುದೇ ರಾಷ್ಟ್ರೀಯ ಮತದಾರರ ದಿನದ ಮುಖ್ಯ ಉದ್ದೇಶವಾಗಿದೆ.

ರಾಷ್ಟ್ರೀಯ ಮತದಾರರ ದಿನವು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಬೇಕಾದ ದಿನ. ಜಾಗೃತ ಮತದಾರನೇ ಬಲಿಷ್ಠ ರಾಷ್ಟ್ರದ ಮೂಲ ಎಂಬ ಸಂದೇಶವನ್ನು ಈ ದಿನ ನಮಗೆ ಮತ್ತೆ ಮತ್ತೆ ನೆನಪಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !