ಮೈಸೂರು ದಸರಾ ಮತ್ತು ನವರಾತ್ರಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಶರನ್ನವರಾತ್ರಿ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿ ಅಕ್ಟೋಬರ್ 2ರಂದು ವಿಜಯದಶಮಿಯೊಂದಿಗೆ ಮುಕ್ತಾಯವಾಗಲಿದೆ. ಒಂಬತ್ತು ದಿನಗಳ ಕಾಲ ಮಾತೆ ದುರ್ಗೆಯ ವಿವಿಧ ರೂಪಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಪ್ರತಿದಿನ ದೇವಿಯ ವಿಶೇಷ ರೂಪಕ್ಕೆ ಅನುಗುಣವಾಗಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭಕರವೆಂದು ನಂಬಿಕೆ ಇದೆ.
ನವರಾತ್ರಿ 2025: ಪ್ರತಿದಿನ ಧರಿಸಬೇಕಾದ ಬಣ್ಣಗಳು
ಮೊದಲ ದಿನ- ಶೈಲಪುತ್ರಿ – ಕಿತ್ತಳೆ ಬಣ್ಣ ಧರಿಸುವುದು ಶಕ್ತಿ ಮತ್ತು ಉತ್ಸಾಹಕ್ಕೆ ಸಂಕೇತ.
ಎರಡನೇ ದಿನ- ಬ್ರಹ್ಮಚಾರಿಣಿ – ಕೆಂಪು ಬಣ್ಣ ಧರಿಸುವುದು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ.
ಮೂರನೇ ದಿನ- ಚಂದ್ರಘಂಟಾ – ಕೆಂಪು ಬಣ್ಣವೇ ಶುಭ, ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ನಾಲ್ಕನೇ ದಿನ- ಕೂಷ್ಮಾಂಡಾ – ಕಡು ನೀಲಿ ಬಣ್ಣ ಧರಿಸುವುದು ಸ್ಥಿರತೆ ಮತ್ತು ವಿಶ್ವಾಸಕ್ಕೆ ಪ್ರತೀಕ.
ಐದನೇ ದಿನ- ಸ್ಕಂದಮಾತಾ – ಹಳದಿ ಬಣ್ಣ ಸಂತೋಷ ಮತ್ತು ಸಕಾರಾತ್ಮಕ ಶಕ್ತಿ ತರುತ್ತದೆ.
ಆರನೇ ದಿನ- ಕಾತ್ಯಾಯನಿ – ಹಸಿರು ಬಣ್ಣ ಸಮೃದ್ಧಿ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ.
ಏಳನೇ ದಿನ- ಕಾಳರಾತ್ರಿ – ಬೂದು ಬಣ್ಣ ಸಮತೋಲನ ಮತ್ತು ಗಂಭೀರತೆಗೆ ಪ್ರತೀಕ.
ಎಂಟನೇ ದಿನ- ಮಹಾಗೌರಿ – ನೇರಳೆ ಬಣ್ಣ ಆಧ್ಯಾತ್ಮಿಕತೆ ಮತ್ತು ಶಾಂತಿಗೆ ಸಂಕೇತ.
ಒಂಬತ್ತನೇ ದಿನ- ಸಿದ್ಧಿದಾತ್ರಿ – ನವಿಲು ಹಸಿರು ಬಣ್ಣ ಅದೃಷ್ಟ ಮತ್ತು ಸಮೃದ್ಧಿಯನ್ನು ತರಲಿದೆ.
ಈ ಬಣ್ಣಗಳನ್ನು ಧರಿಸುವುದರಿಂದ ಹಬ್ಬದ ಸಂಭ್ರಮ ಹೆಚ್ಚುವುದಲ್ಲದೆ, ಮನಸ್ಸು ಹಾಗೂ ಪರಿಸರದಲ್ಲಿಯೂ ಸಕಾರಾತ್ಮಕತೆ ಮೂಡುತ್ತದೆ. ನವರಾತ್ರಿ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಬಣ್ಣಗಳ ಮೂಲಕ ಜೀವನದಲ್ಲಿ ಚೈತನ್ಯ ತುಂಬುವ ಸಂಪ್ರದಾಯವೂ ಆಗಿದೆ.