ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಯುಪಿಐ (Navi UPI), 2026ರ ಟಿ20 ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ತನ್ನ ಸಹಭಾಗಿತ್ವವನ್ನು ನವೀಕರಿಸಿಕೊಂಡಿದ್ದು, ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ಮುಂದುವರಿಯಲಿದೆ.
ಈ ವರ್ಷದ ಸಹಭಾಗಿತ್ವದ ವಿಶೇಷತೆಯಾಗಿ, ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್ ಪವರ್ಡ್ ಬೈ ನವಿ ಯುಪಿಐ’ ಎಂಬ ಹೊಸ ಪ್ರಶಸ್ತಿಯನ್ನು ಪರಿಚಯಿಸುತ್ತಿದೆ. ವಿಜೇತ ಆಟಗಾರರಿಗೆ ₹50,000 ಬಹುಮಾನದ ಮೊತ್ತವನ್ನು ನವಿ ಯುಪಿಐ ಮೂಲಕ ತಕ್ಷಣವೇ ವರ್ಗಾಯಿಸಲಾಗುತ್ತದೆ.
ರಾಜೀವ್ ನರೇಶ್ MD & CEO, ನವಿ ಲಿಮಿಟೆಡ್ ಮಾತನಾಡಿ ‘ಆರ್‌ಸಿಬಿ ಜೊತೆಗಿನ ಸಹಭಾಗಿತ್ವ ಮುಂದುವರಿಸುತ್ತಿರುವುದು ಸಂತೋಷ ತಂದಿದೆ. ಕ್ರಿಕೆಟ್‌ನಲ್ಲಿ ವೇಗದ ಕ್ಷಣಗಳೇ ಫಲಿತಾಂಶ ನಿರ್ಧರಿಸುತ್ತವೆ. ನಮ್ಮ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದ ಮ್ಯಾಚ್’ ಪರಿಕಲ್ಪನೆಯು ನವಿ ಯುಪಿಐನ ವೇಗ ಮತ್ತು ತಕ್ಷಣದ ಪಾವತಿ ಸೇವೆಯನ್ನು ಪ್ರತಿಬಿಂಬಿಸುತ್ತದೆ’ ಎಂದರು .
ರಾಜೇಶ್ ವಿ ಮೆನನ್ CEO, ಆರ್‌ಸಿಬಿ ಮಾತನಾಡಿ ನವಿ ಸಂಸ್ಥೆಯು ತನ್ನ ನವೀನ ತಂತ್ರಜ್ಞಾನದ ಮೂಲಕ ಪಾವತಿ ವ್ಯವಸ್ಥೆಯನ್ನು ಸುಲಭಗೊಳಿಸಿದೆ. ಆರ್‌ಸಿಬಿ ತಂಡದ ವೇಗ ಮತ್ತು ಪ್ರಭಾವಕ್ಕೆ ಈ ಸಹಭಾಗಿತ್ವವು ಪೂರಕವಾಗಿದೆ” ಎಂದರು.



