ದೇಶದಾದ್ಯಂತ ಕೋಟ್ಯಾಂತರ ಹಿಂದುಗಳು ಭಕ್ತಿ-ಭಾವದಿಂದ ಆಚರಿಸುವ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ನವರಾತ್ರಿ ಕೂಡ ಒಂದು. ದುರ್ಗಾ ದೇವಿಯ ಆರಾಧನೆಗೆ ಮೀಸಲಾಗಿರುವ ಈ ಹಬ್ಬ ಒಂಬತ್ತು ದಿನಗಳ ಕಾಲ ನಡೆಯುತ್ತಿದ್ದು, ಪ್ರತಿದಿನವೂ ತಾಯಿ ದುರ್ಗೆಯ ವಿಭಿನ್ನ ರೂಪಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರು ಉಪವಾಸವ್ರತ ಪಾಲಿಸಿ, ಕಲಶ ಸ್ಥಾಪನೆ ಮಾಡಿ ದೇವಿಯನ್ನು ಮನೆಗೆ ಆಹ್ವಾನಿಸುವ ಪರಂಪರೆ ಪಾಲಿಸುತ್ತಾರೆ. ಈ ಅವಧಿಯಲ್ಲಿ ಶುಭಕಾರ್ಯಗಳನ್ನು ಪ್ರಾರಂಭಿಸುವುದು, ಹೊಸ ವಸ್ತುಗಳನ್ನು ಖರೀದಿಸುವುದು ಅತ್ಯಂತ ಮಂಗಳಕರವೆಂದು ನಂಬಿಕೆ ಇದೆ.
ಕಾಮಧೇನು ವಿಗ್ರಹ ಅಥವಾ ಫೋಟೋ: ಮನೆಗೆ ಸಂಪತ್ತು, ಆರೋಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸುತ್ತದೆ ಎಂಬ ನಂಬಿಕೆ.

ಬೆಳ್ಳಿ ನಾಣ್ಯ, ಶ್ರೀಯಂತ್ರ, ಕಲಶ: ಹಣಕಾಸಿನ ಸ್ಥಿರತೆ ಹಾಗೂ ದುರ್ಗಾ ದೇವಿಯ ಆಶೀರ್ವಾದ ದೊರಕುತ್ತದೆ.
ಮನೆ, ವಾಹನ ಅಥವಾ ಆಸ್ತಿ: ನವರಾತ್ರಿ ಅವಧಿಯಲ್ಲಿ ಖರೀದಿ ಮಾಡಿದರೆ ದೀರ್ಘಕಾಲದ ಲಾಭ ಹಾಗೂ ಶುಭ ಫಲ ನೀಡುತ್ತದೆ.

ತುಳಸಿ, ಶಮಿ, ಬಾಳೆಗಿಡ, ಮನಿ ಪ್ಲಾಂಟ್ ಮುಂತಾದ ಸಸ್ಯಗಳು: ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ವಾಸ್ತು ದೋಷ ಪರಿಹಾರ ಮಾಡುತ್ತವೆ.

ಇಷ್ಟ ದೇವರ ವಿಗ್ರಹ ಅಥವಾ ಫೋಟೋ: ಮನೆಯಲ್ಲಿ ಸ್ಥಾಪನೆ ಮಾಡಿದರೆ ಆಧ್ಯಾತ್ಮಿಕ ಶಾಂತಿ ಹಾಗೂ ಶುಭ ಫಲ ನೀಡುತ್ತದೆ.
ಶೃಂಗಾರದ ವಸ್ತುಗಳು: ವಿಶೇಷವಾಗಿ ಸಪ್ತಮಿ, ಅಷ್ಟಮಿ ಮತ್ತು ನವಮಿ ದಿನಗಳಲ್ಲಿ ಖರೀದಿಸಿದರೆ ಅದೃಷ್ಟ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗುತ್ತದೆ.
