ಹೊಸದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡು ಮನೆ ಕಳೆದುಕೊಂಡ ಫಲಾನುಭವಿಗಳಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಲು ಉದಾಸೀನತೆ ತೋರಿದ ರೈಲ್ವೆ ಇಲಾಖೆಗೆ ಕಚೇರಿಯ ಚಿರಾಸ್ತಿಗಳಾದ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ನೀಡಿದೆ ಎಂದು ವಕೀಲರಾದ ಕೃಷ್ಣರಾಜು ಹಾಗೂ ನರೇಂದ್ರ ತಿಳಿಸಿದ್ದಾರೆ.
ಪಟ್ಟಣದ ಪುರಸಭಾ ವ್ಯಾಪ್ತಿಗೆ ಬರುವ ಮಲ್ಲಾಘಟ್ಟ ಗ್ರಾಮದ ಮೂಡಲಗಿರಿಯಯ್ಯ ಮತ್ತು ಲಂಕಯ್ಯ ಭೂ ಸ್ವಾದಿನದಲ್ಲಿ ಮನೆ ಕಳೆದು ಕೊಂಡವರಾಗಿದ್ದು, ಹತ್ತು ವರ್ಷಗಳ ಹಿಂದೆ ರೈಲ್ವೆ ಇಲಾಖೆ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಲು ರೈತರ ಮನೆಗಳನ್ನ ಮತ್ತು ಭೂಮಿಯನ್ನು ಸ್ವಾಧೀನ ಸ್ವಾಧೀನ ಪಡಿಸಿಕೊಂಡಿತ್ತು.
2020 ರಲ್ಲಿ ನ್ಯಾಯಾಲಯ ಇಬ್ಬರೂ ಫಲಾನುಭವಿಗಳಿಂದ 20 ಲಕ್ಷ ಪರಿಹಾರ ನೀಡಲು ಆದೇಶ ನೀಡಿದ್ದರೂ ರೈಲ್ವೆ ಇಲಾಖೆ ಪರಿಹಾರ ನೀಡದೆ ಉದಾಸೀನತೆ ತೋರುತ್ತಲೇ ಬಂದಿದ್ದರಿಂದ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯ ಪಟ್ಟಣದ ರೈಲ್ವೆ ಸ್ಟೇಷನ್ ನಲ್ಲಿರುವ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ನೀಡಿದ್ದರಿಂದ ನ್ಯಾಯಾಲಯದ ಸಿಬ್ಬಂದಿಗಳಾದ ಕಲ್ಪನಾ ಮತ್ತು ಮಹೇಶ್ ಗುರುವಾರ ರೈಲ್ವೆ ಸ್ಟೇಷನ್ ಗೆ ತೆರಳಿ ಕಚೇರಿಯ ಪೀಠೋಪಕರಣಗಳನ್ನ ಜಪ್ತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮನೆ ಕಳೆದುಕೊಂಡು ಪರಿಹಾರ ಸಿಗದ ಫಲಾನುಭವಿ ಗಳಾದ ಮೂಡಲಗಿರಿಯಯ್ಯ, ಲಂಕಯ್ಯ, ವಕೀಲರಾದ ನರೇಂದ್ರ, ಕೃಷ್ಣರಾಜು ಇದ್ದರು.


