ಹೊಸದಿಗಂತ ಡಿಜಿಟಲ್ ಡೆಸ್ಕ್:
ನರೇಂದ್ರ ಮೋದಿ ಪ್ರಧಾನಿಯಾಗಿಷ್ಟು ವರ್ಷ ನೆಹರು ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿನಲ್ಲಿದ್ದರು ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ ನೆಹರೂ ವಿರುದ್ಧ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದರು. ಮೋದಿ ಪ್ರಧಾನಿಯಾಗಿದ್ದಷ್ಟು ವರ್ಷ ನೆಹರು ಜೈಲಿನಲ್ಲಿದ್ದರು ಎಂದು ಕುಟುಕಿದರು.
ಪ್ರಧಾನಿ ಮೋದಿ ಗುರಿಯಾಗಿಸಿ ಮಾತನಾಡಿದ ಸಂಸದೆ, ನಮ್ಮ ಪ್ರಧಾನಿ 12 ವರ್ಷಗಳ ಕಾಲ ಹುದ್ದೆಯಲ್ಲಿದ್ದಾರೆ. ಆದ್ರೆ ಪಂಡಿತ್ ನೆಹರು ಬಹುತೇಕ ಅಷ್ಟೇ ವರ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿನಲ್ಲಿ ಕಳೆದರು. ನಂತರ 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ರು ಎಂದರು.
ʼಮೋದಿ ಪ್ರಧಾನಿಯಾಗಿದ್ದಷ್ಟು ವರ್ಷ ನೆಹರು ದೇಶಕ್ಕಾಗಿ ಜೈಲಿನಲ್ಲಿದ್ದರುʼ

