Saturday, November 1, 2025

ನೆಹರು ನಿರ್ಧಾರದಿಂದ ಕಾಶ್ಮೀರ ಸಂಪೂರ್ಣ ವಿಲೀನವಾಗಲಿಲ್ಲ!: ಮೋದಿ ತೀವ್ರ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತಿನ ಏಕ್ತಾ ನಗರದಲ್ಲಿರುವ ಏಕತಾ ಪ್ರತಿಮೆಯ ಬಳಿ ನಡೆದ ‘ರಾಷ್ಟ್ರೀಯ ಏಕತಾ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿ, ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಹೇಳಿದ್ದೇನು?:

ಸ್ವಾತಂತ್ರ್ಯಾನಂತರ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತವನ್ನು ಏಕೀಕರಿಸುವಲ್ಲಿ ಸರ್ದಾರ್ ಪಟೇಲರು ವಹಿಸಿದ ಮಹತ್ವದ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು.

ಸರ್ದಾರ್ ಪಟೇಲರು ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಒಗ್ಗೂಡಿಸಲು ಬಯಸಿದ್ದರು, ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಮೋದಿ ಆರೋಪಿಸಿದರು.

“ಕಾಶ್ಮೀರವನ್ನು ವಿಭಜಿಸಲಾಯಿತು, ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜವನ್ನು ನೀಡಲಾಯಿತು. ಕಾಂಗ್ರೆಸ್‌ನ ಈ ತಪ್ಪಿನಿಂದಾಗಿ ರಾಷ್ಟ್ರವು ದಶಕಗಳ ಕಾಲ ನೋವು ಅನುಭವಿಸಿತು,” ಎಂದು ಅವರು ತೀವ್ರವಾಗಿ ಕಿಡಿ ಕಾರಿದರು.

ಪಟೇಲ್ ಅವರಿಗೆ ‘ಒಂದು ಭಾರತ, ಅತ್ಯುತ್ತಮ ಭಾರತ’ ಎಂಬ ಕಲ್ಪನೆಯೇ ಅತ್ಯಂತ ಮುಖ್ಯವಾಗಿತ್ತು. ಅವರು ಇತಿಹಾಸ ಬರೆಯುವ ಸಮಯ ವ್ಯರ್ಥ ಮಾಡುವ ಬದಲು, ಅದನ್ನು ರಚಿಸಲು ಶ್ರಮಿಸಬೇಕು ಎಂದು ನಂಬಿದ್ದರು ಎಂದು ಪ್ರಧಾನಿ ಬಣ್ಣಿಸಿದರು.

error: Content is protected !!