Wednesday, September 10, 2025

ಭಾರತದ ಗಡಿ ತಲುಪಿದ ನೇಪಾಳದ ಗಲಭೆ ಉದ್ವಿಗ್ನತೆ: ಗಡಿ ಬಂದ್, ವಿಮಾನಗಳ ಮಾರ್ಗ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆರೆಯ ದೇಶವಾದ ನೇಪಾಳದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಅಲ್ಲಿನ ಸರ್ಕಾರ ಪತನವಾಗಿ ಪ್ರಧಾನಿ ಬೇರೆಡೆ ಪಲಾಯನ ಮಾಡಿದ್ದಾರೆ. ನೇಪಾಳದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದಂತೆ ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯುದ್ದಕ್ಕೂ 600 ಕಿ.ಮೀ. ಉದ್ದದಲ್ಲಿ ಉದ್ವಿಗ್ನತೆ ಆವರಿಸಿದೆ.

ಬಹ್ರೈಚ್‌ನಿಂದ ಲಖಿಂಪುರ ಖೇರಿಯವರೆಗೆ, ಸಶಸ್ತ್ರ ಸೀಮಾ ಬಲ್ ಮತ್ತು ರಾಜ್ಯ ಪೊಲೀಸರು ಕ್ರಾಸಿಂಗ್‌ಗಳನ್ನು ಮುಚ್ಚಿದ್ದಾರೆ. ನಾಗರಿಕರ ಚಲನವಲನಗಳನ್ನು ನಿರ್ಬಂಧಿಸಿದ್ದಾರೆ.

ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ನಿವಾಸವನ್ನು ಸುಟ್ಟುಹಾಕಲಾಯಿತು, ರಾಜಕೀಯ ಕಚೇರಿಗಳನ್ನು ಧ್ವಂಸಗೊಳಿಸಲಾಯಿತು. ಇದರಿಂದ ಭಾರತದ ಗಡಿಗಳನ್ನು ಮುಚ್ಚಲಾಗಿದೆ, ಕಠ್ಮಂಡುವಿಗೆ ಹೋಗುವ ವಿಮಾನಗಳನ್ನು ಸಹ ಉತ್ತರ ಪ್ರದೇಶದ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಇದರಿಂದಾಗಿ ಉತ್ತರ ಪ್ರದೇಶದ 7 ಗಡಿ ಜಿಲ್ಲೆಗಳು ಹೆಚ್ಚಿನ ಅಲರ್ಟ್​​ನಲ್ಲಿವೆ.

ಇದನ್ನೂ ಓದಿ