ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಸಿಡ್ನಿಯ ಬಾಂಡಿ ಬೀಚ್ ನಲ್ಲಿ ದಾಳಿ ಬಳಿಕ ಆಸ್ಟ್ರೇಲಿಯಾ ಸರ್ಕಾರ ಯಹೂದಿ ವಿರೋಧಿ ನೀತಿಯನ್ನು ಉತ್ತೇಜಿಸುತ್ತಿದೆ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.
ಪ್ಯಾಲೇಸ್ಟಿನಿಯನ್ ರಾಜ್ಯತ್ವವನ್ನು ಗುರುತಿಸುವುದಾಗಿ ಕ್ಯಾನ್ ಬೆರಾ ಘೋಷಿಸಿದ ನಂತರ ಆಗಸ್ಟ್‌ನಲ್ಲಿ ಆಂಥೋನಿ ಅಲ್ಬನೀಸ್‌ಗೆ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿದ ನೆತನ್ಯಾಹು ಹೇಳಿದ್ದಾರೆ.
ಮೂರು ತಿಂಗಳ ಹಿಂದೆಯೇ ‘ನಿಮ್ಮ ನೀತಿಯು ಯಹೂದಿ ವಿರೋಧಿ ನೀತಿಯ ಬೆಂಕಿ ಮೇಲೆ ತುಪ್ಪ ಸುರಿದಂತೆ’ ಎಂದು ಆಸ್ಟ್ರೇಲಿಯಾದ ಪ್ರಧಾನಿಗೆ ಬರೆದಿದ್ದಾಗಿ ತಿಳಿಸಿದ್ದಾರೆ.
ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನೆತನ್ಯಾಹು ಯಹೂದಿ ವಿರೋಧಿ ನೀತಿಕ್ಯಾನ್ಸರ್ ಇದ್ದಂತೆ. ನಾಯಕರು ಮೌನವಾಗಿರುವಾಗ, ಕಾರ್ಯನಿರ್ವಹಿಸದಿದ್ದಾಗ ಇದು ಹರಡುತ್ತದೆ ಎಂದು ಹೇಳಿದರು.

