Tuesday, January 13, 2026
Tuesday, January 13, 2026
spot_img

ಅಣ್ಣಾಮಲೈ ಶೂನ್ಯ ಎಂದ ಆದಿತ್ಯ ಠಾಕ್ರೆಗೆ ಖಡಕ್ ತಿರುಗೇಟು ನೀಡಿದ ನೆಟ್ಟಿಗರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಹಾಗೂ ಮುಂಬೈ ಎಂಎನ್ಎಸ್ ನಾಯಕ ರಾಜ್ ಠಾಕ್ರೆ ನಡುವಿನ ಸಮರಕ್ಕೆ ತುಪ್ಪ ಸುರಿಯಲು ಉದ್ಧವಾ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಎಂಟ್ರಿಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಣ್ಣಾಮಲೈ ಶೂನ್ಯ ಎಂದ ಆದಿತ್ಯ ಠಾಕ್ರೆಗೆ ಹಲವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಕಾವು ತೀವ್ರಗೊಳ್ಳುತ್ತಿದ್ದಂತೆ ಶಿವಸೇನೆ, ಎಂಎನ್ಎಸ್ ಅಣ್ಣಾಮಲೈ ವಿರುದ್ಧ ಸಮರಕ್ಕಿಳಿದಿದೆ. ಅಣ್ಣಾಮಲೈ ಬಿಜೆಪಿಯ ಪ್ರಮುಖ ನಾಯಕ, ಅವರೇ ಬಿಜೆಪಿಯ ಮುಖ. ಆದರೆ ಅಣ್ಣಾಮಲೈ ಫುಲ್ ಝೀರೋ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಖಡಕ್ ಉತ್ತರ ಕೊಟ್ಟ ಜನರು
ಆದ್ರೆ ಜನರು, ಅದಿತ್ಯ ಠಾಕ್ರೆಗೆ ಅಣ್ಣಾಮಲೈ ಯಾರು ಅನ್ನೋದನ್ನು ದಾಖಲೆ ಸಮೇತ ನೀಡಿದ್ದಾರೆ. ಜೊತೆಗೆ ಆದಿತ್ಯ ಠಾಕ್ರೆ ಯಾರು ಎಂದು ಪ್ರಶ್ನಿಸಿದ್ದಾರೆ.
ಕುಟುಂಬ ರಾಜಕಾರಣ, ವಶಂಪಾರಂಪರ್ಯ ಹೊರತುಪಡಿಸಿದರೆ ಆದಿತ್ಯ ಠಾಕ್ರೆ ಬಳಿ ಏನಿದೆ? ಆದಿತ್ಯ ಠಾಕ್ರೆಗೆ ನಿಕ್ ನೇಮ್ ನೇಪೋ ಕಿಡ್ , ಆದರೆ ಅಣ್ಣಾಮಲೈ ನಿಕ್ ನೇಮ್ ಸಿಂಘಮ್ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ.

ಅಣ್ಣಾಮಲೈ ಯಾರು ಅನ್ನೋದನ್ನು ಚಿಂತಕ, ಲೇಖಕ, ಆನಂದ್ ರಂಘನಾಥನ್ ವಿವರಿಸಿದ್ದಾರೆ. 12ನೇ ತರಗತಿಯಲ್ಲಿ ಶೇಕಡಾ 95 ಮಾರ್ಕ್ಸ್, ಬಿಇ ಎಂಜಿನಿಯರಿಂಗ್‌ನಲ್ಲಿ ಶೇಕಡಾ 84, UPSE ರ್ಯಾಂಕ್ 244, CAT ಅಂಕ 99.32 , ಐಐಎಂ ಲಖೌನದಲ್ಲಿ ಪದವಿ, ಆಕ್ಸ್‌ಫರ್ಡ್‌ನಲ್ಲಿ ಅಧ್ಯಯನ, ಐಪಿಎಸ್ ಅಧಿಕಾರಿ, ಪೊಲೀಸ್ ಸೂಪರಿಡೆಂಟ್, ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್, ತಮಿಳು ನಾಡು ಬಿಜೆಪಿ ಮಾಜಿ ಅಧ್ಯಕ್ಷರಾಗಿದ್ದಾರೆ. ಆದಿತ್ಯ ಠಾಕ್ರೆ ಅರ್ಹತೆ ಕುಟುಂಬ ರಾಜಕಾರಣ ಎಂದು ಆನಂದ್ ರಂಘನಾಥನ್ ಹೇಳಿದ್ದಾರೆ.

ಆದಿತ್ಯ ಠಾಕ್ರೆ ಶಿವಸೇನೆಯ ನಾಯಕ, ಮಾಜಿ ಮಂತ್ರಿಯಾಗಿದ್ದಾರೆ. ಇದು ಬಾಳ್ ಠಾಕ್ರೆ ಸ್ಥಾಪಿಸಿದ ಶಿವಸೇನೆಯಿಂದ. ಆದಿತ್ಯ ಠಾಕ್ರೆ ಕುಟುಂಬ ರಾಜಕಾರಣ ಮಾಡಿದ್ದು ಬಿಟ್ಟರೆ ಸ್ವಂತವಾಗಿ ಏನು ಮಾಡಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ತಮ್ಮ ಸೇವೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸಿಂಘಮ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

Most Read

error: Content is protected !!