Sunday, December 21, 2025

ಹೆಬ್ಬಾಳ ಫ್ಲೈಓವರ್‌ನಲ್ಲಿ ಹೊಸ ಲೂಪ್ ರ‍್ಯಾಂಪ್‌ ಓಪನ್: ಟ್ರಾಫಿಕ್ ಕಿರಕಿರಿಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಪ್ರದೇಶವಾದ ಹೆಬ್ಬಾಳ ಮೇಲ್ಸೆತುವೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಲವು ವರ್ಷಗಳ ಕಾಯುವಿಕೆಯ ನಂತರ, ಎಸ್ಟೀಮ್ ಮಾಲ್ ಕಡೆಯಿಂದ ನಗರದ ಒಳಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸ ಲೂಪ್ ರ‍್ಯಾಂಪ್‌ ಅನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಯಲಹಂಕ, ಸಹಕಾರನಗರ, ಜಕ್ಕೂರು ಮತ್ತು ತುಮಕೂರು ರಸ್ತೆ ಕಡೆಯಿಂದ ನಗರಕ್ಕೆ ಬರುವ ವಾಹನಗಳಿಗೆ ಇದು ನೇರ ಸಂಪರ್ಕ ಕಲ್ಪಿಸಲಿದೆ.

ಎಸ್ಟೀಮ್ ಮಾಲ್ ಮುಂಭಾಗದಲ್ಲಿ ಅನುಭವಿಸುತ್ತಿದ್ದ ಟ್ರಾಫಿಕ್ ಕಿರಿಕಿರಿ ತಪ್ಪಲಿದ್ದು, ವಾಹನಗಳು ಸರಾಗವಾಗಿ ಮೇಖ್ರಿ ಸರ್ಕಲ್ ಕಡೆಗೆ ಸಾಗಬಹುದು.

ಕಳೆದ ಆಗಸ್ಟ್‌ನಲ್ಲಿ ಕೆ.ಆರ್. ಪುರಂನಿಂದ ನಗರಕ್ಕೆ ಬರುವ ಲೂಪ್ ತೆರೆಯಲಾಗಿತ್ತು. ಈಗ ಎರಡನೇ ಪ್ರಮುಖ ರ‍್ಯಾಂಪ್ ಕೂಡ ಬಳಕೆಗೆ ಲಭ್ಯವಾಗಿದ್ದು, ಹೆಬ್ಬಾಳ ಜಂಕ್ಷನ್‌ನಲ್ಲಿ ಒತ್ತಡ ಗಣನೀಯವಾಗಿ ಕಡಿಮೆಯಾಗಿದೆ.

ಸತತ ಕಾಮಗಾರಿಯಿಂದ ಹೈರಾಣಾಗಿದ್ದ ಸವಾರರು, ಈಗ ಸುಗಮವಾಗಿ ಸಂಚರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. “ಮೊದಲು ಇಲ್ಲಿ ಗಂಟೆಗಟ್ಟಲೆ ಕಾಯಬೇಕಿತ್ತು, ಈಗ ನಿಮಿಷಗಳಲ್ಲಿ ನಗರ ಪ್ರವೇಶಿಸಬಹುದು” ಎಂಬುದು ಸವಾರರ ಅಭಿಪ್ರಾಯವಾಗಿದೆ.

error: Content is protected !!