Monday, November 24, 2025

ಭಾರತೀಯ ನೌಕಾಪಡೆಯಲ್ಲಿ ಹೊಸ ‘ಸೈಲೆಂಟ್ ಹಂಟರ್’: ಜಲಾಂತರ್ಗಾಮಿ ವಿರೋಧಿ ‘ಮಾಹೆ’ ಹಡಗು ಸೇವೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ನೌಕಾನೆಲೆಯಲ್ಲಿ ಇಂದು ಭಾರತೀಯ ನೌಕಾಪಡೆಯ ಶಕ್ತಿಗೊಳಿಸುವತ್ತ ಮಹತ್ವದ ಹೆಜ್ಜೆಯೊಂದು ಇಡಲಾಗಿದೆ. ದೇಶದ ಕರಾವಳಿ ಭದ್ರತೆ ಹೆಚ್ಚಿಸುವ ಉದ್ದೇಶದೊಂದಿಗೆ, ಜಲಾಂತರ್ಗಾಮಿ ವಿರೋಧಿ ‘ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್’ (ASW–SWC) ಸರಣಿಯ ಮೊದಲ ಯುದ್ಧ ನೌಕೆಯಾದ ‘ಮಾಹೆ’ ಆವೃತ್ತಿಯ ಅಧಿಕಾರಪೂರ್ವಕವಾಗಿ ನೌಕಾಪಡೆಯ ಬಳಕೆಗಾಗಿ ನಿಯೋಜಿಸಲಾಗಿದೆ. ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಅಸ್ತ್ರ ಸೇರ್ಪಡೆಗೆ ರಾಷ್ಟ್ರದ ರಕ್ಷಣಾ ಶಕ್ತಿಯಲ್ಲಿ ಮಹತ್ವದ ಸ್ಥಾನವಿದೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ‘ಮಾಹೆ’, ಕಾರ್ಯಾಚರಣೆಗೆ ಮುನ್ನವೇ “ಸೈಲೆಂಟ್ ಹಂಟರ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೆಡಾರ್‌ಗೆ ಸಿಗದ ಸ್ಟೆಲ್ತ್ ತಂತ್ರಜ್ಞಾನ, ಚುರುಕು ಚಲನೆ, ನಿಖರ ಗುರಿತಪ್ಪಿಸದ ಶಸ್ತ್ರಸಾಮರ್ಥ್ಯಗಳಿಂದ ಶತ್ರು ಜಲಾಂತರ್ಗಾಮಿಗಳನ್ನು ಸದ್ದಿಲ್ಲದೆ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಈ ಹಡಗಿನಲ್ಲಿದೆ.

ಈ ಹಡಗಿನ ನಿಯೋಜನೆಗೆ ಪಶ್ಚಿಮ ನೌಕಾ ಕಮಾಂಡ್‌ನ ಕಮಾಂಡರ್–ಇನ್–ಚೀಫ್ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಉಪಸ್ಥಿತರಿರಾಲಿದ್ದಾರೆ. ಕರಾವಳಿ ಪ್ರಾಬಲ್ಯ ಹೆಚ್ಚಿಸಲು ಮತ್ತು ಶತ್ರುಗಳ ನೀರಿನಡಿ ಚಟುವಟಿಕೆಗಳನ್ನು ತಡೆಯಲು ‘ಮಾಹೆ’ ನೌಕಾಪಡೆಯ ಹೊಸ ಬಲವಾಗಿ ಪರಿಣಮಿಸಿದೆ.

error: Content is protected !!