ಹೊಸದಿಗಂತ ಡಿಜಿಟಲ್ ಡೆಸ್ಕ್:
ತೇಜಸ್ ಯುದ್ಧವಿಮಾನದ ಡೆಲಿವರಿ ಕೊಡಲು ವಿಳಂಬ ಮಾಡುತ್ತಿದ್ದ ಎಚ್ಎಎಲ್ ಬಗ್ಗೆ ಭಾರತೀಯ ಸೇನೆ ಅಸಮಾಧಾನಗೊಂಡಿತು. ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದ ಎಂಜಿನ್ ಸಮಸ್ಯೆ ನಿವಾರಣೆ ಆಗಿದೆ. ಅಮೆರಿಕದ ಜಿಇ ಕಂಪನಿಯು ಎಂಜಿನ್ ಡೆಲಿವರಿ ಕೊಡಲು ಆರಂಭಿಸಿದೆ. ಈ ವಿಮಾನಕ್ಕೆ ಬೇಕಾಗಿರುವ ಎಂಜಿನ್ ಅನ್ನು ಅಮೆರಿಕದ ಜಿಇ ಸಂಸ್ಥೆ ಸರಬರಾಜು ಮಾಡುತ್ತಿದೆ. ಇಂದು ಗುರುವಾರ ಎಚ್ಎಎಲ್ ಮೂರನೇ ಜಿಇ-404 ಎಂಜಿನ್ ಅನ್ನು ಪಡೆದಿದೆ.
ಸೆಪ್ಟೆಂಬರ್ ಕೊನೆಯಲ್ಲಿ ನಾಲ್ಕನೇ ಎಂಜಿನ್ ಸರಬರಾಜಾಗಲಿದೆ ಎಂದು ಎಚ್ಎಎಲ್ ಹೇಳಿಕೊಂಡಿದೆ. ಇದರೊಂದಿಗೆ, ಎಲ್ಸಿಎ ಎಂಕೆ1ಎ ಯುದ್ಧ ವಿಮಾನಗಳ ಡೆಲಿವರಿ ಕಾರ್ಯ ಸುಗಮಗೊಳ್ಳಲಿದೆ.
ಈಗ ಮೂರನೇ ಜಿಇ ಎಂಜಿನ್ ಬಂದಿರುವುದರಿಂದ ಶೀಘ್ರದಲ್ಲೇ ತೇಜಸ್ ವಿಮಾನ ತಯಾರಾಗಿ ಹೊರಗೆ ಬರುವ ನಿರೀಕ್ಷೆ ಇದೆ. ಎಚ್ಎಎಲ್ ಬೆಂಗಳೂರಿನಲ್ಲಿ ಎರಡು, ಮತ್ತು ನಾಶಿಕ್ನಲ್ಲಿ ಒಂದು ಎಲ್ಸಿಎ ತಯಾರಿಕಾ ಘಟಕ ಹೊಂದಿದೆ.