Sunday, December 7, 2025

ಹೊಸ ವರ್ಷದ ಸಂಭ್ರಮಾಚರಣೆ: ಖಾಕಿಪಡೆ ಹೈ ಅಲರ್ಟ್‌: ಬಾಂಬ್ ಸ್ಕ್ವಾಡ್‌ ಗೆ ಸ್ಪೆಷಲ್ ಟ್ರೈನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ರಾಜಧಾನಿಯಲ್ಲಿ ನಡೆದ ಇತ್ತೀಚಿನ ಬಾಂಬ್ ಸ್ಫೋಟ ಘಟನೆಗಳ ಹಿನ್ನೆಲೆ ಬೆಂಗಳೂರಿನ ಭದ್ರತಾ ವಲಯದಲ್ಲಿ ಎಚ್ಚರಿಕೆ ಹೆಚ್ಚಿಸಿದೆ. ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಬಾಂಬ್ ಸ್ಫೋಟದ ಬಳಿಕ, ಹೊಸ ವರ್ಷದ ಸಂಭ್ರಮೋತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಪೂರ್ವಸಿದ್ಧತೆ ಆರಂಭಿಸಿದ್ದಾರೆ. ಡಿಸೆಂಬರ್ ಅಂತ್ಯ ಹಾಗೂ 2026ರ ಹೊಸ ವರ್ಷದ ಆಚರಣೆ ವೇಳೆ ನಗರದಲ್ಲಿನ ಜನಸಂದಣಿ ಪ್ರದೇಶಗಳು ಪೊಲೀಸರ ವಿಶೇಷ ನಿಗಾವಳಿಗೆ ಒಳಪಡಲಿವೆ.

ಬೆಂಗಳೂರು ನಗರದಲ್ಲಿ ನೈಟ್ ಪಾರ್ಟಿಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

ಘಟನಾ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಹಾಗೂ ಅಪಾಯಕಾರಿಯಾದ ವಸ್ತುಗಳನ್ನು ಬೇರ್ಪಡಿಸಿ ಸುರಕ್ಷಿತವಾಗಿ ವಿಲೇವಾರಿ ಮಾಡುವ ವಿಧಾನಗಳನ್ನೂ ಸಿಬ್ಬಂದಿಗೆ ವಿವರಿಸಲಾಗಿದೆ.

error: Content is protected !!