January21, 2026
Wednesday, January 21, 2026
spot_img

ನ್ಯೂಜಿಲೆಂಡ್ ಬ್ಯಾಟ್ಸ್ ಮ್ಯಾನ್ ಮಿಚೆಲ್ ಗೆ ಜಾಕ್ ಪಟ್: ODI ರ‍್ಯಾಂಕಿಂಗ್ ನಲ್ಲಿ ನಂ. 1, ಕೊಹ್ಲಿಗೆ ಮಿಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ನೂತನ ಏಕದಿನ ಬ್ಯಾಟಿಂಗ್‌ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಭಾರತದ ವಿರುದ್ಧದ ಅದ್ಭುತ ಪ್ರದರ್ಶನ ನೀಡಿದ ನಂತರ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ವಿರುದ್ಧದ ಸರಣಿಯಲ್ಲಿ ಮಿಚೆಲ್ ಎರಡು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 352 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌ನ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ಮತ್ತು ಸಾರ್ವಕಾಲಿಕ ಮೂರನೇ ಗರಿಷ್ಠ ರನ್ ಆಗಿತ್ತು.

ಮಿಚೆಲ್ ಅವರ ಅದ್ಭುತ ಪ್ರದರ್ಶನದಿಂದಾಗಿ ನ್ಯೂಜಿಲೆಂಡ್ ತಂಡವು 37 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವ ಮೂಲಕ ಸರಣಿಯನ್ನು 1-2 ಅಂತರದಿಂದ ಗೆದ್ದಿತು ಮತ್ತು ಭಾರತೀಯ ನೆಲದಲ್ಲಿ ಏಕದಿನ ಮಾದರಿಯಲ್ಲಿ ತಮ್ಮ ಮೊದಲ ಸರಣಿ ಗೆಲುವು ದಾಖಲಿಸಿತು.

ಮಿಚೆಲ್‌ ಪ್ರಸ್ತುತ 845 ರೇಟಿಂಗ್‌ ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವಿರಾಟ್‌ ಕೊಹ್ಲಿ 795 ಅಂಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.ಅಫ್ಘಾನಿಸ್ತಾನದ ಇಬ್ರಾಹಿಂ ಜದ್ರಾನ್‌(764) ಒಂದು ಸ್ಥಾನದ ಏರಿಕೆ ಕಂಡು ಮೂರಕ್ಕೇರಿದರು. ಹಿಟ್‌ ಮ್ಯಾನ್‌ ರೋಹಿತ್‌ ಶರ್ಮ(757) ನಾಲ್ಕನೇ ಸ್ಥಾನಕ್ಕಿಳಿದರು.

ಕೆಎಲ್ ರಾಹುಲ್ 10 ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ ರಾಹುಲ್ ಈ ಸಾಧನೆ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ 11 ನೇ ಸ್ಥಾನದಲ್ಲಿದ್ದಾರೆ, ಶುಭಮನ್ ಗಿಲ್ 5 ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಏತನ್ಮಧ್ಯೆ, ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅತಿ ಹೆಚ್ಚು ಏರಿಕೆ ಕಂಡವರಾಗಿದ್ದು, ಭಾರತ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿನ ಪ್ರದರ್ಶನದ ನಂತರ ಆರು ಸ್ಥಾನಗಳು ಏರಿಕೆಯಾಗಿ 33 ನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲಿಂಗ್ ಶ್ರೇಯಾಂಕ ಅಗ್ರಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ (710 ಅಂಕಗಳು) ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ (670 ಅಂಕಗಳು) ಮೊದಲೆರಡು ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.

ಟಾಪ್-‌10 ಬ್ಯಾಟಿಂಗ್ ಶ್ರೇಯಾಂಕ
ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್); 845 ರೇಟಿಂಗ್ ಅಂಕ

ವಿರಾಟ್ ಕೊಹ್ಲಿ (ಭಾರತ); 795 ರೇಟಿಂಗ್ ಅಂಕ

ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ); 764 ರೇಟಿಂಗ್ ಅಂಕ

ರೋಹಿತ್ ಶರ್ಮಾ (ಭಾರತ); 757 ರೇಟಿಂಗ್ ಅಂಕ

ಶುಭ್‌ಮನ್ ಗಿಲ್ (ಭಾರತ); 723 ರೇಟಿಂಗ್ ಅಂಕ

ಬಾಬರ್ ಅಜಮ್ (ಪಾಕಿಸ್ತಾನ); 722 ರೇಟಿಂಗ್ ಅಂಕ

ಹ್ಯಾರಿ ಟೆಕ್ಟರ್ (ಐರ್ಲೆಂಡ್); 708 ರೇಟಿಂಗ್ ಅಂಕ

ಶೈ ಹೋಪ್ (ವೆಸ್ಟ್ ಇಂಡೀಸ್); 701 ರೇಟಿಂಗ್ ಅಂಕ

ಚರಿತ್ ಅಸಲಂಕಾ (ಶ್ರೀಲಂಕಾ); 690 ರೇಟಿಂಗ್ ಅಂಕ

ಕೆ.ಎಲ್ ರಾಹುಲ್ (ಭಾರತ); 670 ರೇಟಿಂಗ್ ಅಂಕ

Must Read