ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಏಳು ತಿಂಗಳಿಂದ ಫಿಟ್‌ನೆಸ್ ಸಮಸ್ಯೆಗಳಿಂದ ರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಗಿದ್ದರು ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ನ್ಯೂಝಿಲೆಂಡ್ ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಕಳೆದ ಕೆಲವು ಸರಣಿಗಳಿಂದ ಹೊರಗುಳಿದಿದ್ದ ವಿಲಿಯಮ್ಸನ್ ಈಗ ಫಿಟ್ ಆಗಿ ಸರಣಿಗೆ ಸಜ್ಜಾಗಿದ್ದಾರೆ. 14 ಸದಸ್ಯರ ನ್ಯೂಝಿಲೆಂಡ್ ಏಕದಿನ ತಂಡದಲ್ಲಿ ಕೇನ್ ಸಜ್ಜಾಗಿರುವುದು ಪ್ರಮುಖ ವಿಚಾರವಾಗಿದೆ.
ಈ ಕುರಿತು ಟೀಂ ನಾಯಕನಾಗಿ ಮಿಚೆಲ್ ಸ್ಯಾಂಟ್ನರ್ ಮಾಹಿತಿ ನೀಡಿದ್ದು, ವಿಕೆಟ್ ಕೀಪರ್ ಸ್ಥಾನದಲ್ಲಿ ಟಾಮ್ ಲ್ಯಾಥಮ್ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್ ಸ್ಥಾನದಲ್ಲಿ ಮೈಕೆಲ್ ಬ್ರೇಸ್‌ವೆಲ್ ಮತ್ತು ರಚಿನ್ ರವೀಂದ್ರ ತಂಡದಲ್ಲಿ ಸೇರಿದ್ದಾರೆ. ಗಾಯದಿಂದ ಬಳಲುತ್ತಿದ್ದ ಆಲ್‌ರೌಂಡರ್ ಗ್ಲೆನ್ ಫಿಲಿಪ್, ವೇಗಿ ವಿಲಿಯಮ್ ಒರೋಕ್ ಹಾಗೂ ಲಾಕಿ ಫರ್ಗುಸನ್ ಈ ಸರಣಿಗೆ ಅಲಭ್ಯರಾಗಿದ್ದು, ಅವರ ಬದಲಿಗೆ ಕೈಲ್ ಜೇಮಿಸನ್, ಮಾರ್ಕ್ ಚಾಪ್‌ಮನ್ ಹಾಗೂ ಜೇಕಬ್ ಡಫಿ ತಂಡದಲ್ಲಿ ಸೇರಿದ್ದಾರೆ.
ಈ ಸರಣಿ ಅಕ್ಟೋಬರ್ 26ರಂದು ಮೌಂಟ್ ಮಂಗನುಯಿಯಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯ ಅಕ್ಟೋಬರ್ 29ರಂದು ಹ್ಯಾಮಿಲ್ಟನ್‌ನಲ್ಲಿ, ಮೂರನೇ ಪಂದ್ಯ ನವೆಂಬರ್ 1 ರಂದು ವೆಲ್ಟಿಂಗ್ಟನ್‌ನಲ್ಲಿ ನಡೆಯಲಿದೆ. ಫಿಟ್ ವಿಲಿಯಮ್ಸನ್ ಮತ್ತು ಹೊಸ ಮುಖಗಳೊಂದಿಗೆ ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.