February 2, 2026
Monday, February 2, 2026
spot_img

ಒಂಬತ್ತು ವರ್ಷದ ಪ್ರೀತಿ ಮದುವೆಯಾದ ಎರಡೇ ತಿಂಗಳಿಗೆ ಕೊನೆಯಾಯ್ತು! ಗಂಡನನ್ನು ಕೊಂದವಳು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರ ಪ್ರದೇಶದ ಬರೇಲಿಯಲ್ಲಿ ಒಂಬತ್ತು ವರ್ಷಗಳ ಪ್ರೇಮ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ. ಒಂಬತ್ತು ವರ್ಷಗಳ ಕಾಲ ಪ್ರೀತಿಸಿ ಈ ಜೋಡಿ ನವೆಂಬರ್ ನಲ್ಲಿ ಮದುವೆಯಾಗಿತ್ತು. ಪತ್ನಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಳು, ಆದರೆ ಪೊಲೀಸರ ತನಿಖೆಯಿಂದ ಅಸಲಿ ಸತ್ಯ ಹೊರಬಂದಿದೆ.

ಜಿತೇಂದ್ರ ಕುಮಾರ್‌ ಯಾದವ್‌ ಕೊಲೆಯೈದ ವ್ಯಕ್ತಿ, ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನೆರೆಹೊರೆಯವರಿಗೆ ಅನುಮಾನ ಬಾರದಂತೆ, ಆಕೆ ತನ್ನ ಪತಿಯ ಆತ್ಮಹತ್ಯೆಯೆಂದು ಬಿಂಬಿಸಿದ್ದಳು. ಜಿತೇಂದ್ರ ಯಾದವ್ ಕೊಲೆಯಾದ ಐವಿಆರ್‌ಐನ ಗುತ್ತಿಗೆ ಕೆಲಸಗಾರ. ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಶಪುರಂ ಕಾಲೋನಿಯಲ್ಲಿ ಅವರು ವಾಸಿಸುತ್ತಿದ್ದರು.

ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿರುವುದು ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಎಲ್ಲಾ ಪುರಾವೆಗಳನ್ನು ಒಟ್ಟುಗೂಡಿಸಿದ ಪೊಲೀಸರು, ಜಿತೇಂದ್ರ ಅವರನ್ನು ಅವರ ಪತ್ನಿ ಕತ್ತು ಹಿಸುಕಿ ಕೊಂದಿದ್ದಾರೆ ಮತ್ತು ಅವರ ಮಾವ, ಅತ್ತೆ ಮತ್ತು ಸೋದರ ಮಾವ ಅವರು ಕೊಲೆಗೆ ನೆರವು ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಮೃತದೇಹವನ್ನು ಕಿಟಕಿಯ ಗ್ರಿಲ್‌ಗೆ ಮಫ್ಲರ್‌ನಿಂದ ನೇತುಹಾಕಲಾಯಿತು. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಸೋದರ ಮಾವನನ್ನು ಹುಡುಕುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !