February 1, 2026
Sunday, February 1, 2026
spot_img

ದಾಖಲೆಯ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್: ಈ ಬಾರಿ ಎಷ್ಟು ಅವಧಿಯಲ್ಲಿ ಮುಕ್ತಾಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್ ಭಾಷಣಕ್ಕೆ ಅವರು ಕೇವಲ 81 ನಿಮಿಷಗಳನ್ನು ಮಾತ್ರ ತೆಗೆದುಕೊಂಡಿದ್ದು, ಅಂದರೆ 1 ಗಂಟೆ 25 ನಿಮಿಷ.

ಈ ಮೂಲಕ ಅಮೃತಕಾಲದ ಮೊದಲ ಬಜೆಟ್ ಅಧಿವೇಶನ ಎಂಬ ಹೆಗ್ಗಳಿಕೆಯ ಜತೆಗೆ, ಕಡಿಮೆ ಸಮಯದಲ್ಲಿ ಮಂಡಿಸಲಾದ ಬಜೆಟ್ ಎಂಬ ಬಿರುದನ್ನು ಪಡೆದುಕೊಂಡಿದೆ.

ವಿಶೇಷ ಎಂದರೆ ದೀರ್ಘಾವಧಿಯ ಬಜೆಟ್ ಭಾಷಣದ ದಾಖಲೆ ಕೂಡ ನಿರ್ಮಲಾ ಸೀತಾರಾಮನ್ ಅವರದ್ದೇ. 2020ರಲ್ಲಿ ಅವರು ನಿರಂತರವಾಗಿ 2 ಗಂಟೆ 45 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡುವ ಮೂಲಕ, ಅದುವರೆಗೆ ಇದ್ದ ಎಲ್ಲ ದಾಖಲೆಗಳನ್ನು ಮುರಿದಿದ್ದರು. ಭಾಷಣದ ಮಧ್ಯೆ ಸ್ವಲ್ಪ ವಿರಾಮ ಪಡೆದು ಪಾನೀಯ ಸೇವಿಸಿ, ನಂತರ ಮತ್ತೆ ಬಜೆಟ್ ಓದುವಿಕೆಯನ್ನು ಮುಂದುವರಿಸಿದ್ದು ಗಮನಾರ್ಹ. ಬಜೆಟ್ ಇತಿಹಾಸದಲ್ಲಿ ಇಷ್ಟೊಂದು ದೀರ್ಘಾವಧಿಯ ಭಾಷಣವನ್ನು ನಡೆಸಿದವರಲ್ಲಿ ಅವರೇ ಮೊದಲಿಗರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೂರನೇ ಬಜೆಟ್ ಇದಾಗಿದ್ದು, ಸೀತಾರಾಮನ್ ಮಂಡಿಸುತ್ತಿರುವ ಒಂಭತ್ತನೇ ಮುಂಗಡಪತ್ರ ಇದಾಗಿದೆ. 2019ರಲ್ಲಿ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದು, ಆ ಭಾಷಣವು 2 ಗಂಟೆ 17 ನಿಮಿಷಗಳ ಕಾಲ ನಡೆಯಿತು.

ನಿರ್ಮಲಾ ಸೀತಾರಾಮನ್ ಅವರ ಈವರೆಗಿನ ಭಾಷಣ ಅವಧಿ

ನಿರ್ಮಲಾ ಸೀತಾರಾಮನ್ ಅವರ 2019ರ ಮೊದಲ ಕೇಂದ್ರ ಬಜೆಟ್ ಭಾಷಣ 2 ಗಂಟೆ 17 ನಿಮಿಷ, 2020ರ ಬಜೆಟ್ ಭಾಷಣ 2 ಗಂಟೆ 42 ನಿಮಿಷ, 2021ರಲ್ಲಿ 1 ಗಂಟೆ 50 ನಿಮಿಷ, 2022ರಲ್ಲಿ 1 ಗಂಟೆ 30 ನಿಮಿಷ, 2023ರಲ್ಲಿ 1 ಗಂಟೆ 27 ನಿಮಿಷ, 2024 ಮಧ್ಯಂತರ ಬಜೆಟ್ ಭಾಷಣ 56– 58 ನಿಮಿಷ, 2025ರ ಬಜೆಟ್ ಭಾಷಣ 1 ಗಂಟೆ 14 ನಿಮಿಷ, 2026ರಲ್ಲಿ 1 ಗಂಟೆ 25 ನಿಮಿಷಗಳಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !