March 7, 2026
Saturday, March 7, 2026
spot_img

FASHION | ಎಷ್ಟೇ ವಿಧದ ಬಳೆಗಳು ಬಂದರೂ ಗಾಜಿನ ಬಳೆ ʼOGʼ ಅಲ್ಲವೇ! ಇದನ್ನು ಯಾಕೆ ಹಾಕಬೇಕು?

ಕೈತುಂಬ ಬಳೆ ಹಾಕಿದ ಹೆಣ್ಣುಮಕ್ಕಳನ್ನು ನೋಡೋದೇ ಒಂದು ಖುಷಿ. ಹಿಂದಿನ ಕಾಲದಿಂದಲೂ ಮಹಿಳೆಯರು ಕೈ ತುಂಬಾ ಬಳೆ ಹಾಕುತ್ತಿದ್ದರು, ಕಾಲಕ್ಕೆ ತಕ್ಕಂತೆ ಬಳೆಯ ಫ್ಯಾಷನ್‌ ಕೂಡ ವಿಭಿನ್ನವಾಗುತ್ತಲೇ ಇದೆ. ಗಾಜಿನ ಬಳೆಯಲ್ಲೇ ಡಿಸೈನ್ಸ್‌, ಮೆಟಲ್‌, ವೆಲ್ವೆಟ್‌ ಇನ್ನಿತರ ವಿಧಗಳ ಬಳೆಗಳು ಮಾರುಕಟ್ಟೆಯಲ್ಲಿವೆ.

ಎಷ್ಟೇ ರೀತಿಯ ಬಳೆಗಳು ಇದ್ದರೂ ಗಾಜಿನ ಬಳೆಯೇ ಬೆಸ್ಟ್‌, ಇದು ಒಜಿ ಅಲ್ಲವೇ!

ಗಾಜಿನ ಬಳೆಯನ್ನು ಯಾಕೆ ಹಾಕಬೇಕು?
ಗಾಜಿನ ಬಳೆಗಳು ದೇಹದ ಉಷ್ಣತೆಯನ್ನು ಕಾಪಾಡಲು ಸಹಕರಿಸುತ್ತವೆ. ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತವೆ. ಹಿರಿಯರು ದಾರಿದ್ರ್ಯ ನಿವಾರಣೆಗಾಗಿ ಬಳೆ ಹಾಕುತ್ತಿದ್ದರು ಎನ್ನುವ ನಂಬಿಕೆಯೂ ಇದೆ.

ಕತ್ತಲಲ್ಲಿ ಓಡಾಡುವಾಗ, ಸಮಸ್ಯೆ ಬಂದಾಗ ಬಳೆಯ ಸದ್ದಿನಿಂದ ಜನರಿದ್ದಾರೆಂದು ಗುರುತಿಸಲು ಆಗುತ್ತಿತ್ತು.

ಮತ್ತೆ ಟ್ರೆಂಡ್‌ ಚೇಂಜ್‌ : ಈಗಿನ ಹುಡುಗಿಯರಿಗೆ ಮತ್ತೆ ಬಳೆಗಳ ಮೇಲೆ ಆಸಕ್ತಿ ಬಂದಿದೆ. ಕೈತುಂಬಾ ಗಾಜಿನ ಬಳೆಗಳನ್ನು ಹಾಕಿಕೊಳ್ಳುವುದನ್ನು ಅವರು ಇಷ್ಟಪಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !