April 9, 2026
Thursday, April 9, 2026
spot_img

ಇನ್ಮುಂದೆ ಪಾಸ್‌ಪೋರ್ಟ್-ಬೋರ್ಡಿಂಗ್ ಪಾಸ್ ಕಿರಿಕಿರಿ ಇಲ್ಲ: ನಿಮ್ಮ ಮುಖವೇ ನಿಮ್ಮ ಗುರುತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಂಪೂರ್ಣ ಸಜ್ಜಾಗಿದೆ. ಈ ವಿನೂತನ ಪ್ರಯೋಗವನ್ನು ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ ಜಂಟಿಯಾಗಿ ಯಶಸ್ವಿಯಾಗಿ ನಡೆಸಿವೆ.

ಈ ಹೊಸ ವ್ಯವಸ್ಥೆಯ ವಿಶೇಷತೆಗಳೇನು?

ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಎಲ್ಲಾ ಹಂತಗಳು ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ನಡೆಯಲಿವೆ.

ಇನ್ನು ಮುಂದೆ ಪ್ರಯಾಣಿಕರು ಪ್ರತಿ ಹಂತದಲ್ಲೂ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸುವ ಅಗತ್ಯವಿರುವುದಿಲ್ಲ. ಮುಖ ಸ್ಕ್ಯಾನ್ ಮಾಡುವ ಮೂಲಕವೇ ಭದ್ರತಾ ತಪಾಸಣೆ ಪೂರೈಸಬಹುದು.

ಪ್ರಯಾಣಿಕರ ಮಾಹಿತಿಯ ರಕ್ಷಣೆಗಾಗಿ ‘ಸೆಲ್ಫ್-ಸೋವರಿನ್ ಐಡೆಂಟಿಟಿ’ ಎಂಬ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇದರಿಂದ ಪ್ರಯಾಣಿಕರ ಖಾಸಗಿ ಮಾಹಿತಿ ಸುರಕ್ಷಿತವಾಗಿರಲಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಈ ತಂತ್ರಜ್ಞಾನವು ಕ್ಯೂನಲ್ಲಿ ನಿಲ್ಲುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಜಾಗತಿಕ ಮಟ್ಟದಲ್ಲಿ ಈ ಪ್ರತಿಷ್ಠಿತ ಯೋಜನೆಯನ್ನು ಜಾರಿಗೆ ತರುತ್ತಿರುವ ಭಾರತದ ಏಕೈಕ ವಿಮಾನ ನಿಲ್ದಾಣ ಬೆಂಗಳೂರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ತಂತ್ರಜ್ಞಾನದ ಮೂಲಕ ಅಂತರಾಷ್ಟ್ರೀಯ ವಿಮಾನ ಯಾನವು ಇನ್ನು ಮುಂದೆ ಮೊದಲಿಗಿಂತ ಹೆಚ್ಚು ಸುಲಭ, ಸುರಕ್ಷಿತ ಮತ್ತು ವೇಗವಾಗಿರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !