March 23, 2026
Monday, March 23, 2026
spot_img

ಗ್ಯಾಸ್ ಖಾಲಿಯಾದ್ರೆ ಟೆನ್ಷನ್ ಬೇಡ, ಪೆಟ್ರೋಲ್ ಬೆಲೆಗೆ ಕಣ್ಣೀರು ಹಾಕೋದು ಬೇಡ.. ಹಾಗಿದ್ರೆ ಮಾಡೋದೇನು?

ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಪೇಪರ್ ನೋಡೋಕೆ ಭಯವಾಗುತ್ತೆ. ಯಾಕಂದ್ರೆ ಸುದ್ದಿಯಲ್ಲಿ ಸಮಾಚಾರ ಇರುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ “ಶಾರ್ಟ್ ಸರ್ಕ್ಯೂಟ್” ಮಾತ್ರ ಗ್ಯಾರಂಟಿ ಇರುತ್ತೆ!

ಒಂದು ಕಾಲದಲ್ಲಿ ಪೆಟ್ರೋಲ್ ಬಂಕ್‌ಗೆ ಹೋಗಿ “ಫುಲ್ ಟ್ಯಾಂಕ್ ಮಾಡಿ” ಅಂತ ರಾಜನ ತರಹ ಹೇಳ್ತಿದ್ವಿ. ಆದ್ರೆ ಈಗ ಬಂಕ್ ಹತ್ರ ಹೋದ್ರೆ ಸಾಕು, ಗಾಡಿ ಸ್ಟಾರ್ಟ್ ಆಗೋ ಮುಂಚೆ ನಮ್ಮ ಎದೆ ಬಡಿತ ಸ್ಟಾರ್ಟ್ ಆಗುತ್ತೆ. “ಅಣ್ಣಾ, ಬರಿ ನೂರು ರೂಪಾಯಿಗೆ ಹಾಕಿ” ಅಂತ ಕೇಳೋ ಸ್ಥಿತಿ ಬಂದಿದೆ. ನೂರು ರೂಪಾಯಿಗೆ ಸಿಗೋ ಪೆಟ್ರೋಲ್‌ನಲ್ಲಿ ಗಾಡಿ ಮನೆ ಇಂದ ಆಫೀಸ್ ಗೆ ಹೋಗೋಕೆ ಸಾಕಾ ಅನ್ನೋದೇ ದೊಡ್ಡ ಪ್ರಶ್ನೆ.

ಇನ್ನು ಅಡುಗೆ ಮನೆ ಕಡೆ ಬಂದ್ರೆ, ಗ್ಯಾಸ್ ಸಿಲಿಂಡರ್ ಅನ್ನೋದು ಈಗ ಮನೆಯ ಸದಸ್ಯನ ತರಹ ಅಲ್ಲ, ಸಾಕ್ಷಾತ್ ದೇವರ ತರಹ ಆಗಿಬಿಟ್ಟಿದೆ. ಅದಕ್ಕೆ ಹೂವಿನ ಹಾರ ಹಾಕಿ ಪೂಜೆ ಮಾಡೋದಷ್ಟೇ ಬಾಕಿ.

ಬೆಲೆ ಏರಿಕೆ ಅನ್ನೋದು ಹೇಗೆ ಅಂದ್ರೆ, ಸಂಬಳ ಬರೋದು ಏಣಿಯಲ್ಲಿ ಹತ್ತಿ ಬಂದ ಹಾಗೆ ಇರುತ್ತೆ, ಆದ್ರೆ ಬೆಲೆ ಏರಿಕೆ ಮಾತ್ರ ರಾಕೆಟ್ ಹತ್ತಿ ಹೋದ ಹಾಗೆ ಇರುತ್ತೆ. ಕೊನೆಗೆ ನಮಗೆ ಉಳಿಯೋದು ಒಂದೇ… ಅದು “ನಗು”. ಯಾಕಂದ್ರೆ ಟ್ಯಾಕ್ಸ್ ಹಾಕೋಕೆ ಆಗದ ಏಕೈಕ ವಸ್ತು ಅಂದ್ರೆ ನಮ್ಮ ಮುಖದ ಮೇಲಿರೋ ನಗು ಮಾತ್ರ! ಮತ್ಯಾಕೆ ಯೋಚ್ನೆ ಏನಾದ್ರು ಬರ್ಲಿ.. ಹೋಗ್ಲಿ ಯಾವಾಗ್ಲೂ ನಗೋದನ್ನ ಮಾತ್ರ ಮರೀಬೇಡಿ!!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !