March 15, 2026
Sunday, March 15, 2026
spot_img

ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ’: Air India ಪೈಲಟ್ ತಂದೆಗೆ ‘ಸುಪ್ರೀಂ’ ಸಾಂತ್ವನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿಮಗೆ ನೀವೇ ಹೊರೆ ಹೊತ್ತುಕೊಳ್ಳಬೇಡಿ.. ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ನಿಮ್ಮ ಮಗ ಕಾರಣ ಎಂದು ಭಾರತದಲ್ಲಿ ಯಾರೂ ನಂಬುವುದಿಲ್ಲ ಎಂದು ಪೈಲಟ್ ತಂದೆಗೆ ಸುಪ್ರೀಂಕೋರ್ಟ್​ ಸಾಂತ್ವನ ಹೇಳಿದೆ.

ಜೂನ್ 12 ರಂದು, ಏರ್ ಇಂಡಿಯಾದ AI-171 ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಕೆಲವು ಸೆಕೆಂಡುಗಳ ನಂತರ, ಅದು ಹತ್ತಿರದ ವೈದ್ಯಕೀಯ ಕಾಲೇಜಿನ ಮೇಲೆ ಅಪ್ಪಳಿಸಿತು. ಒಬ್ಬ ಪ್ರಯಾಣಿಕ ಮತ್ತು ಹಲವಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ 260 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಈ ದುರ್ಘಟನೆಗೆ ಪೈಲಟ್ ಅಚಾತುರ್ಯವೇ ಕಾರಣ ಎಂಬ ಆರೋಪಿಗಳು ಕೇಳಿಬಂದಿದ್ದವು. ಇದೇ ವಿಚಾರವಾಗಿ ಇಂದು ನಡೆದ ವಿಚಾರಣೆಯಲ್ಲಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ನಿಮ್ಮ ಮಗ ಕಾರಣ ಎಂದು ಭಾರತದಲ್ಲಿ ಯಾರೂ ನಂಬುವುದಿಲ್ಲ ಎಂದು ಪೈಲಟ್ ತಂದೆಗೆ ಸಾಂತ್ವನ ಹೇಳಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದ್ದು, ಇದು ಅವರ ಮಗನ ತಪ್ಪು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಅವರಿಗೆ ಭರವಸೆ ನೀಡಿತು. ಅಪಘಾತಕ್ಕೆ ವಿಮಾನದಲ್ಲಿ ಇಂಧನ ಸ್ಥಗಿತಗೊಂಡಿದ್ದೇ ಕಾರಣ ಎಂಬುದು ತಿಳಿದುಬಂದಿದೆ, ಪೈಲಟ್ ಎಲ್ಲಾದರೂ ಇಂಧನ ಸ್ಥಗಿತಗೊಳಿಸುತ್ತಾರಾ ಎಂದು ನ್ಯಾಯಮೂರ್ತಿಗಳು ಕೇಳಿದ್ದಾರೆ.

ಇನ್ನು ಭಾರತೀಯ ಪೈಲಟ್‌ಗಳ ಒಕ್ಕೂಟದ ಬೆಂಬಲದೊಂದಿಗೆ ಸಲ್ಲಿಸಲಾದ ಈ ಅರ್ಜಿಯು, ನಡೆಯುತ್ತಿರುವ AAIB ತನಿಖೆಯನ್ನು ಮುಕ್ತಾಯಗೊಳಿಸಬೇಕು ಮತ್ತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಾಯುಯಾನ ತಜ್ಞರ ಸ್ವತಂತ್ರ ಸಮಿತಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !