Wednesday, November 5, 2025

ಕಬ್ಬು ಬೆಳೆಗಾರರ ಸಂಕಷ್ಟ ಕೇಳೋರಿಲ್ಲ: ರೈತರ ಹೋರಾಟಕ್ಕೆ ಸ್ಥಬ್ಧವಾಗೋಯ್ತು ಕುಂದಾನಗರಿ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಜಿಲ್ಲಾಧ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪದ ಪಡೆದುಕೊಂಡಿದೆ. ಕಬ್ಬಿನ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಏಳನೇಯ ದಿನಕ್ಕೆ ರೈತರ ಹೋರಾಟ ಕಾಲಿಟ್ಟಿದೆ.

ಬುಧವಾರವು ಕಬ್ಬಿನ ಬೆಲೆ 3500 ರೂ ಮಾಡುವಂತೆ ಆಗ್ರಹಿಸಿ, ತಾಲೂಕಿನಾದ್ಯಂತ ಸ್ವಯಂ ಪೇರಿತವಾಗಿ ರೈತ ಸಂಘಗಳು, ರಸಗೊಬ್ಬರ ಮಾರಾಟಗಾರರು ಮತ್ತು  ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಯಬಾಗ ಸಂಪೂರ್ಣ ಬಂದ್ ಮಾಡಲಾಯಿತು. 

ಪಟ್ಟಣದ ಅಂಬೇಡ್ಕರ ವೃತ್ತದಿಂದ ಝೇಂಡಾ ಕಟ್ಟೆವರೆಗೆ ಬೃಹತ್ ಪಾದಯಾತ್ರೆ ನಡೆಸಿ ರಾಜ್ಯ ಸರಕಾರ ಹಾಗೂ ಕಾರ್ಖಾನೆಗಳ ಮಾಲಿಕರ ವಿರುದ್ಧ ಆಕ್ರೋಶ ಹೊರ ಹಾಕಿ ಟೈಯರ್ ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ‌ ನಡೆಸಿದರು.

ಸಂಪೂರ್ಣವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿ, ಬಸ್ ಸಂಚಾರವು ಸ್ತಬ್ಧಗೊಂಡಿತು. ಕಾರ್ಖಾನೆಗಳ ಮಾಲೀಕರು ಕಬ್ಬು ನುರಿಸಲು ಮುಂದಾದರೆ ಜಿಲ್ಲೆಯಲ್ಲಿ‌ ಕ್ರಾಂತಿಯೇ ನಡೆದು ಹೋಗುತ್ತೆ ಎಂದು ಎಚ್ಚರಿಕೆಯ ‌ನೀಡಿದರು. ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಕ್ಕೆ ಸರಕಾರ ಹಾಗೂ ಕಾರ್ಖಾನೆಗಳ ಮಾಲಿಕರೇ ನೇರ ಹೊಣೆಯಾಗುತ್ತಾರೆ ಎಂದು ಪ್ರತಿಭಟನೆಯ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರು. ‌

error: Content is protected !!