Sunday, January 11, 2026

VIRAL | ಈ ಕೆಲಸ ಪ್ರಯಾಣಿಕರು ಯಾರೂ ಮಾಡೋದಿಲ್ಲ! ರೈಲಿನ ಸಿಂಕ್‌ನಲ್ಲಿ ಕಟ್ಟಿದ್ದ ಕಸ ತೆಗೆದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ರೈಲ್ವೆ ರೈಲನ್ನು ಎಷ್ಟೇ ಸ್ವಚ್ಛ ಮಾಡಿದ್ರೂ ರೈಲು ಗಲೀಚಾಗಿರೋಕೆ ಪ್ರಯಾಣಿಕರೂ ಅರ್ಧ ಕಾರಣವೇ. ತಮ್ಮ ಜಾಗದಲ್ಲಿ ಗಲೀಜಿದ್ರೆ ಕೂಗಾಡುವ ಪ್ರಯಾಣಿಕರು, ಸಾರ್ವಜನಿಕ ಜಾಗ ಅಂದರೆ ಫೂಟ್‌ಪಾತ್‌, ಸಿಂಕ್‌ ಅಥವಾ ಬಾತ್‌ರೂಮ್‌ ಗಲೀಜಿದ್ರೆ ಗಬ್ಬು ಗಬ್ಬು ಎನ್ನುತ್ತಲೇ ಬಳಕೆ ಮಾಡುತ್ತಾರೆ.

ಯಾರೂ ಇದು ನನ್ನ ಡ್ಯೂಟಿ ಎಂದು ಅಂದುಕೊಳ್ಳೋದಿಲ್ಲ. ಆದರೆ ಇಲ್ಲೊಬ್ಬ ಯುವಕ ಬ್ಲಾಕ್‌ ಆದ ಸಿಂಕ್‌ನ್ನು ಕ್ಲೀನ್‌ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಹಲವು ಬಾರಿ ರೈಲಿನ ವಾಶ್​ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್​ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್​ನಲ್ಲಿ ಪ್ಲಾಸ್ಟಿಕ್​ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.

ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸುಂದರವಾದ ವೀಡಿಯೊವನ್ನು @MDAltamashraza ಎಂಬ ಐಡಿಯಿಂದ ಹಂಚಿಕೊಳ್ಳಲಾಗಿದೆ. 33 ಸೆಕೆಂಡುಗಳ ಈ ವೀಡಿಯೊವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, ನೂರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

error: Content is protected !!