Friday, January 9, 2026

ರೈಲು ಹರಿದು ಕೈ ಕಟ್‌ ಆದ್ರೂ ಚಿಂತೆ ಇಲ್ಲ! ಗಾಂಜಾ ಮತ್ತಲ್ಲಿ ಟ್ರೀಟ್‌ಮೆಂಟ್‌ ಮಾಡಿಸದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೈಲು ಹರಿದು ಕೈ ಕಟ್ ಆಗಿದ್ದರೂ ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಬೇಡ ಅಂತ ಅಂಬುಲೆನ್ಸ್‌ನಿಂದ ಜಿಗಿದು ರಸ್ತೆಯಲ್ಲಿ ಓಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಕುಂಬಾರ ಬೀದಿಯಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ದಿಲೀಪ್ ರಾತ್ರಿ ರೈಲ್ವೆ ಹಳಿ ಮೇಲೆ ಮತ್ತಿನಲ್ಲಿ ಬಿದ್ದಿದ್ದಾಗ ರೈಲು ಹರಿದು ಕೈ ಕಟ್ ಆಗಿತ್ತು. ಇದನ್ನ ಕಂಡ ಸ್ಥಳೀಯರು ತುಂಡಾಗಿದ್ದ ಕೈಯನ್ನ ಕವರ್‌ಗೆ ಹಾಕಿಕೊಂಡು ಕೂಡಲೇ 108 ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರು ಕಷ್ಟಪಟ್ಟು ಆಂಬುಲೆನ್ಸ್ ಹತ್ತಿಸಿ ಆಸ್ಪತ್ರೆಗೆ ಕಳಿಸಿದರೆ ಗಾಂಜಾ ನಶೆಯಲ್ಲಿದ್ದ ಯುವಕ ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಅಂಬುಲೆನ್ಸ್‌ನಿಂದ ಇಳಿದು ಎಸ್ಕೇಪ್ ಆಗಿದ್ದಾನೆ.

ದೇವನಹಳ್ಳಿ ಪಟ್ಟಣದ ಕುಂಬಾರರ ಬೀದಿಯಲ್ಲಿ ಮನೆಯೊಂದರ ಬಳಿ ಅವಿತು ಕೂತಿದ್ದಾನೆ. ಸ್ಥಳೀಯರು ಹಾಗೂ ದೇವನಹಳ್ಳಿ ಪೊಲೀಸರು ಗಂಟೆಗಟ್ಟಲೆ ಹುಡುಕಾಡಿ ಕೊನೆಗೆ ದೇವನಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ ಮಾಡಬೇಕಾಗಿತ್ತು. ಆದರೆ ತೀವ್ರತರವಾದ ಗಾಂಜಾ ನಶೆಯಲ್ಲಿದ್ದ ಯುವಕ ಯಾರ ಮಾತು ಕೇಳದೇ ಆಸ್ಪತ್ರೆಯಿಂದಲೂ ಎಸ್ಕೇಪ್ ಆಗಿದ್ದಾನೆ. ಗಾಂಜಾ ನಶೆಯಲ್ಲಿರುವ ಯುವಕನಿಗೆ ತನಗೇನಾಗಿದೆ ಎಂಬ ಪರಿವೇ ಇಲ್ಲ. ಹೀಗಾಗಿ ತನ್ನ ತುಂಡಾಗಿದ್ದ ಕೈಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಚಿಕಿತ್ಸೆ ಪಡೆಯದೆ ಅಲ್ಲಿಂದಲೂ ಎಸ್ಕೇಪ್ ಆಗಿದ್ದಾನೆ. ಒಟ್ನಲ್ಲಿ ಕೈತುಂಡಾಗಿದ್ದರೂ ಯುವಕನ ವರ್ತನೆ ಕಂಡು ದೇವನಹಳ್ಳಿಯ ಕುಂಬಾರಪೇಟೆಯ ಜನ ಬೆಚ್ಚಿಬಿದ್ದಿದ್ದಾರೆ.

error: Content is protected !!