ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್ ಅಥವಾ ಪಾರ್ಸೆಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ಫೆಬ್ರವರಿ 16 (ನಾಳೆ) ರಿಂದಲೇ ನೂತನ ದರಗಳು ಜಾರಿಗೆ ಬರಲಿವೆ.
ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇಚ್ಚ ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ 2021ರಲ್ಲಿ ಲಗೇಜ್ ದರ ಏರಿಸಲಾಗಿತ್ತು, ಆ ಬಳಿಕ ಟಿಕೆಟ್ ದರ ಬದಲಾದರೂ ಲಗೇಜ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಸಂಸ್ಥೆಯು ಈಗಾಗಲೇ ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದೂರದ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ:
| ಹಂತಗಳು (Stages) | ನೂತನ ದರ (ರೂ. ಗಳಲ್ಲಿ) |
| 1 ರಿಂದ 5 ಹಂತಗಳವರೆಗೆ | 6 ರೂ. |
| 6 ರಿಂದ 12 ಹಂತಗಳವರೆಗೆ | 12 ರೂ. |
| 156 ರಿಂದ 160 ಹಂತಗಳವರೆಗೆ | 145 ರೂ. |
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಇನ್ನು ಮುಂದೆ ತಮ್ಮ ಪಾರ್ಸೆಲ್‌ಗಳನ್ನು ಕಳುಹಿಸುವಾಗ ಈ ನೂತನ ದರಗಳನ್ನು ಪಾವತಿಸಬೇಕಾಗುತ್ತದೆ.



