Sunday, November 2, 2025

ಮುಷರಫ್ ಆಡಳಿದಲ್ಲಿ ಅಮೆರಿಕ ಹಿಡಿತದಲ್ಲಿ ಪರಮಾಣು ಶಸ್ತ್ರಾಸ್ತ್ರ: ಪಾಕ್ ಬಣ್ಣ ಬಯಲು ಮಾಡಿದ ಮಾಜಿ ಸಿಐಎ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಆಡಳಿತಾವಧಿಯಲ್ಲಿ ಪರಮಾಣು ಶಸ್ತ್ರಾಗಾರವು ಅಮೆರಿಕದ ಪೆಂಟಗನ್‌ ನಿಯಂತ್ರದಲ್ಲಿತ್ತು ಎಂದು ಹೇಳುವ ಮೂಲಕ ಮಾಜಿ ಸಿಐಎ ಅಧಿಕಾರಿ ಜಾನ್‌ ಕಿರಿಯಾಕೌ ಸ್ಪೋಟಕ ಮಾಹಿತಿ ಬಹಿರಂಗ ಮಾಡಿದ್ದಾರೆ.

ಅಮೆರಿಕದ ಮಾಜಿ ಅಧಿಕಾರಿ ಹೇಳಿಕೆ, ತನ್ನ ಪರಮಾಣು ಶಸ್ತ್ರಾಗಾರಗಳನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನದ ಅಸಮರ್ಥತೆ ಸತ್ಯವನ್ನು ಜಗತ್ತಿಗೆ ಸಾರಿದೆ.

2002ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್‌ ಮುಷರಫ್‌ ಅವರ ಸಹಕಾರವನ್ನು ಖರೀದಿಸಲು, ಅಮೆರಿಕವು ಪಾಕಿಸ್ತಾನಕ್ಕೆ ಲಕ್ಷಾಂತರ ಡಾಲರ್‌ಗಳನ್ನು ಒದಗಿಸಿತ್ತು. ಮುಷರಫ್‌ ಕೂಡ ಅಮೆರಿಕ ಹೇಳಿದಂತೆ ಕೇಳುತ್ತಿದ್ದರಲ್ಲದೇ, ತಮ್ಮ ಪರಮಾಣು ಶಸ್ತ್ರಾಗಾರಗಳ ನಿಯಂತ್ರಣವನ್ನು ಪೆಂಟಗನ್‌ಗೆ ಒಪ್ಪಿಸಿದ್ದರ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾನು 2002ರಲ್ಲಿ ಪಾಕಿಸ್ತನಾದಲ್ಲಿ ಕರ್ತವ್ಯನಿರತನಾಗಿದ್ದಾಗ, ಪೆಂಟಗನ್‌ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ನಿಯಂತ್ರಿಸುತ್ತದೆ ಎಂಬ ಮಾಹಿತಿಯನ್ನು ನನಗೆ ಅನಧಿಕೃತವಾಗಿ ತಿಳಿಸಲಾಯಿತು. ಪಾಕಿಸ್ತಾನದ ಪರಮಾಣು ಕಾರ್ಯಕ್ರಮಗಳು ಭಯೋತ್ಪಾದಕರ ಕೈ ಸೇರಬಾರದು ಎಂಬ ಕಾರಣಕ್ಕೆ, ಪರ್ವೇಜ್‌ ಮುಷರಫ್‌ ಇಂತದ್ದೊಂದು ನಿರ್ಧಾರ ತೆಗೆದುಕೊಂಡಿದ್ದರು ಎಂಬ ಸಂಗತಿ ನನ್ನ ಅರಿವಿಗೆ ಬಂದಿತು ಎಂದು ಹೇಳಿದ್ದಾರೆ.

2001ರಲ್ಲಿ ಭಾರತದ ಮೇಲೆ ಪರಮಾಣು ದಾಳಿ ಮಾಡುವ ಯೋಜನೆ ಹಾಕಲಾರಂಭಿಸಿದ್ದ ಪಾಕಿಸ್ತಾನ, ಅಮೆರಿಕದ ಸ್ನೇಹ ಸಂಪಾದಿಸಿದ್ದರ ಹುಮ್ಮಸ್ಸಿನಲ್ಲಿತ್ತು. ಆದರೆ ಅಮೆರಿಕಕ್ಕೆ ಪಾಕಿಸ್ತಾನದ ಪರಮಾಣು ಕಾರ್ಯಕ್ರಮಗಳನ್ನು ನಿಯಂತ್ರಿಸುವ ಉದ್ದೇಶ ಮಾತ್ರವಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಪರಮಾಣು ಯುದ್ಧಗಳಿಗೆ ಆಸ್ಪದ ಕೊಡದಿರಲು ಅಮೆರಿಕ ನಿರ್ಧರಿಸಿತು ಎಂದು ಜಾನ್‌ ಜಾನ್‌ ಕಿರಿಯಾಕೌ ತಿಳಿಸಿದ್ದಾರೆ.

2001ರಲ್ಲಿ ನಡೆದ ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ಮತ್ತು 2008ರಲ್ಲಿ ಮುಂಬೈ ನಗರದ ಮೇಲೆ ನಡೆದ ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ದಾಳಿ ಮಾಡಬಹುದು ಎಂದು ಅಮೆರಿಕ ನಿರೀಕ್ಷಿಸಿತ್ತು. ಆದರೆ ಭಾರತವು ಆ ಎರಡೂ ಸಂದರ್ಭಗಳಲ್ಲಿ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳದಿರುವ ನಿರ್ಧಾರ ಮಾಡಿತ್ತು. ನಾವು ಭಾರತದ ಈ ನೀತಿಯನ್ನು ಕಾರ್ಯತಂತ್ರದ ತಾಳ್ಮೆ ಎಂದು ಬಣ್ಣಿಸಿದೆವು ಎಂದು ಜಾನ್‌ ಜಾನ್‌ ಕಿರಿಯಾಕೌ ಹೇಳಿದರು.

2001 ಮತ್ತು 2008ರಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದು ಭಾರತದ ಹಕ್ಕಾಗಿತ್ತು. ಅಮೆರಿಕವೂ ಸೇರಿದಂತೆ ಯಾರೂ ಕೂಡ ಇದನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ಆಗಿನ ಭಾರತೀಯ ಆಡಳಿತಗಾರರು ಪ್ರಬುದ್ಧ ವಿದೇಶಾಂಗ ನೀತಿಯನ್ನು ಪ್ರದರ್ಶಿಸಿ, ಜಗತ್ತನ್ನು ಪರಮಾಣು ಯುದ್ಧದ ಆತಂಕದಿಂದ ದೂರ ಮಾಡಿದರ ಎಂದು ಸಿಐಎ ಮಾಜಿ ಅಧಿಕಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

error: Content is protected !!