Wednesday, November 5, 2025

ದಕ್ಷಿಣ ಆಫ್ರಿಕಾ ಎ ವಿರುದ್ಧದ ಏಕದಿನ ಸರಣಿ: ಭಾರತ ಎ ತಂಡಕ್ಕೆ ತಿಲಕ್‌ ವರ್ಮಾ ಸಾರಥಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದಕ್ಷಿಣ ಆಫ್ರಿಕಾ ಎ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಎ ತಂಡವನ್ನುಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಿಸಿದೆ.

ಭಾರತ ಎ ಹಾಗೂ ದಕ್ಷಿಣ ಎ ತಂಡಗಳ ನಡುವಣ ಮೂರು ಪಂದ್ಯಗಳು ಕ್ರಮವಾಗಿ ನವೆಂಬರ್‌ 13, 16 ಹಾಗೂ 19 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಈ ಎಲ್ಲಾ ಹಗಲು ರಾತ್ರಿ ಪಂದ್ಯಗಳಾಗಿವೆ.

ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ಎ ತಂಡ: ತಿಲಕ್‌ ವರ್ಮಾ (ನಾಯಕ), ಋತುರಾಜ್‌ ಗಾಯಕ್ವಾಡ್‌ (ಉಪ ನಾಯಕ), ಅಭಿಷೇಕ್‌ ಶರ್ಮಾ, ರಿಯಾನ್‌ ಪರಾಗ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಆಯುಷ್‌ ಬದೋನಿ, ನಿಶಾಂತ್‌ ಸಿಂಧು, ವಿಪ್ರಜ್‌ ನಿಗಮ್‌, ಮಾನವ್‌ ಸುತಾರ್‌, ಹರ್ಷಿತ್‌ ರಾಣಾ, ಅರ್ಷದೀಪ್‌ ಸಿಂಗ್‌, ಪ್ರಸಿಧ್‌ ಕೃಷ್ಣ, ಖಲೀಲ್‌ ಅಹ್ಮದ್‌, ಪ್ರಭ್‌ ಸಿಮ್ರನ್‌ ಸಿಂಗ್‌ (ವಿಕೆಟ್‌ ಕೀಪರ್‌).

error: Content is protected !!