ಹೊಸ ದಿಗಂತ ಡಿಜಿಟಲ್ ಡೆಸ್ಕ್
ಒಂದೆಡೆ ರಷ್ಯಾ ಹಾಗೂ ಉಕ್ರೇನ್ ನಡುವಣ ರಾಜತಾಂತ್ರಿಕ ಮಟ್ಟದಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿದ್ದು, ಮತ್ತೊಂದೆಡೆ ಉಕ್ರೇನ್ ಡ್ರೋನ್ ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಉಕ್ರೇನ್‌ನ ಖೆರ್ಸನ್ ಪ್ರದೇಶದ ರಷ್ಯಾ ಆಕ್ರಮಿತ ಹಳ್ಳಿಯಲ್ಲಿ ಹೊಸ ವರ್ಷ ಆಚರಣೆ ವೇಳೆ ಈ ಘಟನೆ ನಡೆದಿದೆ ಎಂದು ರಷ್ಯಾದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಕಪ್ಪು ಸಮುದ್ರದ ಕರಾವಳಿ ಪ್ರದೇಶವಾದ ಖೋರ್ಲಿಯಲ್ಲಿ ಕೆಫೆ ಮತ್ತು ಹೋಟೆಲ್‌ಗೆ ಡ್ರೋನ್ ಅಪ್ಪಳಿಸಿದವು ಎಂದು ರಷ್ಯಾದ ಪ್ರತಿನಿಧಿ ವ್ಲಾಡಿಮಿರ್ ಸಾಲ್ಡೊ ಟೆಲಿಗ್ರಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದಾಳಿ ಕುರಿತು ಉಕ್ರೇನಿಯನ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಲಿಲ್ಲ. ದಾಳಿಯನ್ನು ರಷ್ಯಾದ ಹಲವಾರು ಅಧಿಕಾರಿಗಳು ಖಂಡಿಸಿದ್ದಾರೆ.
ಈ ಮಧ್ಯೆ ಹೊಸ ವರ್ಷದ ಹಿನ್ನೆಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಶಾಂತಿ ಒಪ್ಪಂದ “ಶೇಕಡಾ 90 ರಷ್ಟು ಸಿದ್ಧವಾಗಿದೆ. ಆದರೆ ಉಳಿದ ಶೇ.10 ರಷ್ಟು ಭೂಪ್ರದೇಶದಂತಹ ಪ್ರಮುಖ ಅಂಶಗಳಿಂದಾಗಿ ಇನ್ನೂ ಬಗೆಹರಿದಿಲ್ಲ ಎಂದಿದ್ದಾರೆ.

