ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಹೆಸರನ್ನ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರಾಗಿ ಬಾನು ಮುಷ್ಕಾಕ್ ಅವರ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗು ಇದಕ್ಕೂ ಏನು ಸಂಬಂಧ? ಬೆಜೆಪಿ ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದು ಹೇಳಿದ್ದಾರೆ.