ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾಅಲಿಯಾಸ್ ಸುಲೇಮಾನ್ ಮೂಸಾನನ್ನು ಭಾರತೀಯ ಸೇನೆ ಇಂದು ಎನ್ಕೌಂಟರ್ ಮಾಡಿದೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ವೇಳೆ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿಗೆ ‘ಹೋಗಿ ಮೋದಿಗೆ ಹೇಳು’ ಎಂದು ಸವಾಲು ಹಾಕಿದ್ದ ಮೂಸಾ ಇದೀಗ ಎನ್ಕೌಂಟರ್ನಲ್ಲಿ ಹೊಡೆದುರುಳಿಸಲಾಗಿದೆ.
ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಆತ ಅಡಗಿದ್ದಾನೆ ಎಂಬ ಗುಪ್ತಚರ ಮಾಹಿತಿಯ ನಂತರ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಆಪರೇಷನ್ ಮಹಾದೇವ್ ಕಾರ್ಯಾಚರಣೆ ನಡೆಸಿದರು.ತೀವ್ರವಾದ ಗುಂಡಿನ ಚಕಮಕಿಯ ಸಮಯದಲ್ಲಿ ಮೂಸಾ ಅವರನ್ನು ಹತ್ಯೆ ಮಾಡಲಾಯಿತು.
ಸುಲೇಮಾನ್ ಎಂದೂ ಕರೆಯಲ್ಪಡುವ ಹಾಶಿಮ್ ಮೂಸಾ, ಪಾಕಿಸ್ತಾನಿ ಸೇನಾ ವಿಶೇಷ ಪಡೆಗಳ ಮಾಜಿ ಕಾರ್ಯಕರ್ತನಾಗಿದ್ದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲ್ಪಟ್ಟಿದ್ದಾನೆ.
ಹಾಶಿಮ್ ಮೂಸಾ ಜೊತೆ ಮೃತರಾದ ಇನ್ನೊಬ್ಬರು ಉಗ್ರರು ಕೂಡ ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಲಾಗಿದೆ. ಭದ್ರತಾ ಪಡೆಗಳು ಅವರ ದೇಹಗಳನ್ನು ಮತ್ತು ಅಮೆರಿಕ ನಿರ್ಮಿತ ಕಾರ್ಬೈನ್, ಎಕೆ -47 ರೈಫಲ್, 17 ರೈಫಲ್ ಗ್ರೆನೇಡ್‌ಗಳು ಮತ್ತು ಇತರ ಮಿಲಿಟರಿ ದರ್ಜೆಯ ಉಪಕರಣಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ.