ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಕ್ಕೆ ತೆರಳಿದ್ದ ಹಿಂದುಗಳ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದರು. ಈ ಉಗ್ರ ದಾಳಿ ನಡೆಸಿದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ.
ಆಪರೇಶನ್ ಮಹಾದೇವ್ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ.
ಇತ್ತ ಪಹಲ್ಗಾಮ್ ಸಂಬಂಧಿಸಿದ ಎಲ್ಲಾ ಪ್ರತಿ ದಾಳಿ ಆಪರೇಶನ್ ಸಿಂದೂರ್ ಹೆಸರಿನಲ್ಲಿ ನಡೆದಿತ್ತು. ಆದರೆ ಇದೀಗ ಮೂವರು ಉಗ್ರರ ಹತ್ಯೆ ಮಾಡಿದ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಎಂದು ಹೆಸರಿಡಲಾಗಿದೆ.
ಭಾರತೀಯ ಭದ್ರತಾ ಪಡೆಗಳು “ಆಪರೇಷನ್ ಮಹಾದೇವ್” ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆಯ ಫಲವಾಗಿ, ಶ್ರೀನಗರದ ಡಚಿಗಾಮ್ ಅರಣ್ಯದಲ್ಲಿ ಜುಲೈ 27, 2025 ರಂದು ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.ಈ ಕಾರ್ಯಾಚರಣೆಯ ಯಶಸ್ಸು ಭಾರತದ ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯ ನೀತಿಯನ್ನು ಒತ್ತಿಹೇಳಿದೆ. ಆದರೆ, ಈ ಕಾರ್ಯಾಚರಣೆಗಳಿಗೆ ಆಪರೇಷನ್ ಮಹಾದೇವ್ ಎಂದು ಏಕೆ ಮತ್ತು ಹೇಗೆ ನೀಡಲಾಗುತ್ತೆ? ಹೆಸರಿಟ್ಟಿದ್ದೇಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನದ 9 ಉಗ್ರ ನೆಲೆಯನ್ನು ಪ್ರತಿದಾಳಿ ಮೂಲಕ ಧ್ವಂಸಗೊಳಿಸಿತು. ಇಷ್ಟೇ ಅಲ್ಲ ಭಾರತ ದಾಳಿಗೆ ಪಾಕಿಸ್ತಾನ ತಿರುಗೇಟು ನೀಡುವ ಪ್ರಯತ್ನ ಮಾಡಿತ್ತು. ಆದರೆ ಭಾರತೀಯ ಸೇನೆಯ ಮಾರಕ ದಾಳಿಗೆ ಪಾಕಿಸ್ತಾನ ಯುದ್ಧ ವಿರಾಮಕ್ಕೆ ಬೇಡಿಕೊಂಡಿತ್ತು. ಹೀಗಾಗಿ ಯುದ್ಧ ಅಂತ್ಯಗೊಂಡಿತ್ತು. ಈ ಎಲ್ಲಾ ಕಾರ್ಯಾಚರಣೆಗಳು ಆಪರೇಶನ್ ಸಿಂದೂರ್ ಹೆಸರಿನಲ್ಲಿ ನಡೆದಿತ್ತು. ಇದೀಗ ಆಪರೇಶನ್ ಮಹಾದೇವ್ ಹೆಸರಿನ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ ಉಗ್ರರ ಹತ್ಯೆಯಾಗಿದೆ. ಈ ಹೆಸರಿಡಲು ಮುಖ್ಯ ಕಾರಣ ಹಿಂದುಗಳ ಪವಿತ್ರ ಮಹಾದೇವ ಬೆಟ್ಟ.
ಸೇನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಳಿ ಇರುವ ಲಿಡ್ವಾಸ್ ವಲಯದಲ್ಲಿನ ಕಾರ್ಯಾಚರಣೆಯಲ್ಲಿ ಉಗ್ರರ ಸದಬಡಿದಿದೆ. ಈ ವಲಯದ ಹಿಂದುಗಳ ಪವಿತ್ರ ಮಹಾದೇವ ಬೆಟ್ಟದ ತಪ್ಪಲಿನಲ್ಲಿದೆ. ಕಾಶ್ಮೀರದ ಹಲವು ಜನಪದ ಗೀತೆಗಳಲ್ಲಿ ಈ ಮಹಾದೇವ ಬೆಟ್ಟದ ಉಲ್ಲೇಖವಿದೆ. ಕಾಶ್ಮೀರಿ ಪಂಡಿತರ ಹಲವು ಗ್ರಂಥಗಳಲ್ಲೂ ಈ ಮಹಾದೇವ ಬೆಟ್ಟದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಶಿವನ ಪವಿತ್ರ ಕ್ಷೇತ್ರ ಎಂದೇ ಹಿಂದುಗಳು ತೀರ್ಥ ಯಾತ್ರೆಯನ್ನು ಮಾಡುತ್ತಾರೆ. ಈ ಬೆಟ್ಟದ ತಪ್ಪಲಿನಲ್ಲಿ ನಡೆಸಿದ ಕಾರ್ಯಾಚರಣೆಗೆ ಆಪರೇಶನ್ ಮಹಾದೇವ್ ಎಂದು ಹೆಸರಿಡಲಾಗಿತ್ತು.