ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾರತ ಮುರಿಡ್ಕೆಯಲ್ಲಿರುವ ಉಗ್ರರ ಶಿಬಿರದ ಮೇಲೆ ದಾಳಿ ಮಾಡಿ ಸಂಪೂರ್ಣ ನಾಶ ಪಡಿಸಿದ್ದು ಸತ್ಯ ಎಂದು LeT ಕಮಾಂಡರ್ ಖಾಸಿಮ್ ಒಪ್ಪಿಕೊಂಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಕಾಸಿಮ್, ಮೇ 7ರ ಭಾರತದ ದಾಳಿಯಿಂದ ನಾಶಗೊಂಡ ಕೇಂದ್ರವನ್ನು ಹಿಂದಿನಿಂತ ದೊಡ್ಡದಾಗಿ ಮರುನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ದಾನೆ.
ಮೇ 7 ರಂದು ನಡೆದ ಈ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ಮುರಿಡ್ಕೆ (ಪಂಜಾಬ್, ಪಾಕಿಸ್ತಾನ) ದಲ್ಲಿರುವ ಲಷ್ಕರ್-ಎ-ತೊಯ್ಬಾದ ಅತಿದೊಡ್ಡ ನೆಲೆಯಾದ ಮರ್ಕಜ್-ಎ-ತೊಯ್ಬಾವನ್ನು ನಾಶಪಡಿಸಿತ್ತು. ಈ ಸ್ಥಳವು ಮದರಸಾ ಮತ್ತು ದತ್ತಿ ಕೇಂದ್ರ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಈಗ, ಲಷ್ಕರ್‌ನ ಉನ್ನತ ಕಮಾಂಡರ್ ಖಾಸಿಮ್, ನಾನು ಮರ್ಕಜ್-ಎ-ತೊಯ್ಬಾದ ಅವಶೇಷಗಳ ಮುಂದೆ ನಿಂತಿದ್ದೇನೆ. ಈ ದಾಳಿಯನ್ನು ಆಪರೇಷನ್ ಸಿಂದೂರ್‌ನಲ್ಲಿ ನಾಶಪಡಿಸಲಾಯಿತು ಎಂದು ಹೇಳುವ ವಿಡಿಯೋ ವೈರಲ್ ಆಗಿದೆ.
https://x.com/OsintTV/status/1968865125567226361/video/1
ಇನ್ನೊಂದು ವಿಡಿಯೋದಲ್ಲಿ LeT ಉಪಮುಖ್ಯಸ್ಥ ಸೈಫುಲ್ಲಾ ಕಸೂರಿ, ಪಾಕ್ ಸರ್ಕಾರ ಮತ್ತು ಸೇನೆಯು ಮರುನಿರ್ಮಾಣಕ್ಕೆ ಹಣ ನೀಡಿದೆ ಎಂದು ಹೇಳಿದ್ದಾನೆ. ಭಾರತದ ಗುಪ್ತಚರ ವರದಿಗಳು ಈ ಹೇಳಿಕೆಯನ್ನು ದೃಢಪಡಿಸಿವೆ.