January20, 2026
Tuesday, January 20, 2026
spot_img

ಹೊಸ ವರುಷಕ್ಕೆ ‘ನಮ್ಮ ಮೆಟ್ರೋ’ ಗಿಫ್ಟ್: ಮಧ್ಯರಾತ್ರಿಯೂ ಇರಲಿದೆ ಹಳದಿ, ಹಸಿರು, ನೇರಳೆ ಸಂಚಾರ!

ಬೆಂಗಳೂರು ಅಂದ್ರೆನೇ ಸಂಭ್ರಮದ ಸಾಗರ, ಅದರಲ್ಲೂ ಹೊಸ ವರ್ಷದ ಮುನ್ನಾದಿನ ಸಿಲಿಕಾನ್ ಸಿಟಿಯ ರಂಗು ಹೇಳತೀರದು. 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಸಜ್ಜಾಗುತ್ತಿರುವ ರಾಜಧಾನಿಯ ಜನತೆಗೆ ನಮ್ಮ ಮೆಟ್ರೋ ಭರ್ಜರಿ ಗಿಫ್ಟ್ ನೀಡಿದೆ. ಪಾರ್ಟಿ ಮುಗಿಸಿ ಮನೆಗೆ ಮರಳುವ ಜನರಿಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ, ಸುರಕ್ಷಿತವಾಗಿ ತಲುಪಿಸಲು ಮೆಟ್ರೋ ತನ್ನ ಸಂಚಾರ ಸಮಯವನ್ನು ವಿಸ್ತರಿಸಿದೆ.

ಹೊಸ ವರ್ಷದ ಆಚರಣೆ ಮುಗಿಸಿ ಸುಸ್ತಾಗಿ ಮನೆಗೆ ಮರಳುವವರಿಗೆ ಈ ಬಾರಿ ಮೆಟ್ರೋ ಬೆನ್ನೆಲುಬಾಗಿ ನಿಂತಿದೆ. ನೇರಳೆ, ಹಸಿರು ಮತ್ತು ಹಳದಿ ಮೂರೂ ಮಾರ್ಗಗಳಲ್ಲಿ ರೈಲುಗಳು ಲಭ್ಯವಿರಲಿವೆ.

ಕೊನೆಯ ರೈಲುಗಳ ವೇಳಾಪಟ್ಟಿ ಹೀಗಿದೆ:

ಎಲ್ಲಾ ದಿಕ್ಕುಗಳಿಗೆ ತೆರಳುವ ಕೊನೆಯ ರೈಲುಗಳು ಕೆಂಪೇಗೌಡ ನಿಲ್ದಾಣದಿಂದ (ಮೆಜೆಸ್ಟಿಕ್) ಬೆಳಗಿನ ಜಾವ 2:45ಕ್ಕೆ ಹೊರಡಲಿವೆ.

ಹೊಸ ವರ್ಷದ ಕೇಂದ್ರಬಿಂದು ಎಂ.ಜಿ. ರಸ್ತೆಯಲ್ಲಿ ಈ ಬಾರಿ ಒಂದು ಸಣ್ಣ ಬದಲಾವಣೆ ಇದೆ. ವಿಪರೀತ ಜನದಟ್ಟಣೆಯನ್ನು ನಿಯಂತ್ರಿಸಲು ರಾತ್ರಿ 10 ಗಂಟೆಯ ನಂತರ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನವನ್ನು ಮುಚ್ಚಲಾಗುತ್ತದೆ. ನೀವು ಪಕ್ಕದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಬಳಸಬಹುದು. ರೈಲುಗಳು ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ರಾತ್ರಿ 11 ಗಂಟೆಯ ನಂತರ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಟೋಕನ್ ವಿತರಣೆ ಇರುವುದಿಲ್ಲ. ಹಾಗಾಗಿ ನಿಮ್ಮ ಸ್ಮಾರ್ಟ್ ಕಾರ್ಡ್‌ನಲ್ಲಿ ಮೊದಲೇ ಹಣ ರೀಚಾರ್ಜ್ ಮಾಡಿಸಿಕೊಳ್ಳಿ. ಅಥವಾ ಮೊಬೈಲ್ ಮೂಲಕ ಕ್ಯೂಆರ್ ಟಿಕೆಟ್ ಮುಂಗಡವಾಗಿ ಖರೀದಿಸಿ.

Must Read