ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೊಗೆ 14 ವರ್ಷ..
ಹೌದು, ರಾಜ್ಯ ರಾಜಧಾನಿಯಲ್ಲಿ ನಮ್ಮ ಮೆಟ್ರೊದ ಸಂಚಾರ ಆರಂಭವಾಗಿ ಇಂದಿಗೆ 14 ವರ್ಷ ಪೂರ್ಣವಾಗುತ್ತಿದೆ.
ದೇಶದ ಎರಡನೇ ಅತಿ ಉದ್ದದ ಮೆಟ್ರೋ ಎನ್ನುವ ಹೆಗ್ಗಳಿಕೆ ಹೊಂದಿರುವ ನಮ್ಮ ಮೆಟ್ರೋ ದಿನನಿತ್ಯ ಅಸಂಖ್ಯಾತ ಮಂದಿಗೆ ಸೇವೆ ನೀಡುತ್ತಿದೆ.
ಮೊದಲಿಗೆ 2011 ಅ.20ರಂದು ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ನಮ್ಮ ಮೆಟ್ರೋ ಸಂಚಾರ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತವಾಗಿತ್ತು. 6.7 ಕಿಲೋ ಮೀಟರ್ ಮಾರ್ಗದಲ್ಲಿ ಮೆಟ್ರೋ ಪ್ರಯಾಣ ಮೊದಲ ಬಾರಿಗೆ ಸಾಗಿತ್ತು. ಕ್ರಮೇಣ ಮೆಟ್ರೋ ತನ್ನ ಜಾಲವನ್ನು ವಿಸ್ತರಿಸುತ್ತಾ ಹೋಯಿತು. ಇದೇ ವೇಳೆ ನಮ್ಮ ಮೆಟ್ರೋ ಜೊತೆಗೆ 14 ವರ್ಷಗಳ ಅತ್ಯದ್ಭುತ ಪ್ರಯಾಣದಲ್ಲಿ ಭಾಗವಹಿಸಿದ ಎಲ್ಲಾ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಧನ್ಯವಾದ ತಿಳಿಸಿದೆ.
ನಮ್ಮ ಮೆಟ್ರೊಗೆ 14 ವರ್ಷ: ಅತ್ಯದ್ಭುತ ಪ್ರಯಾಣದಲ್ಲಿ ಜೊತೆಯಾದ ಎಲ್ಲಾ ಪ್ರಯಾಣಿಕರಿಗೆ ಧನ್ಯವಾದ ಎಂದ ಬಿಎಂಆರ್ ಸಿ ಎಲ್!
