April 1, 2026
Wednesday, April 1, 2026
spot_img

ಬಂಗಾಳ ಚುನಾವಣಾ ಅಖಾಡದಲ್ಲಿ ಓವೈಸಿ ಪ್ರಚಾರ: ದೀದಿ ಸರಕಾರದ ವಿರುದ್ಧ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಕಾವೇರುತ್ತಿದ್ದು, ಇಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಗಾಳದಲ್ಲಿ ಟಿಎಂಸಿ ಮತ್ತು ಇತರ ಪಕ್ಷಗಳಿಗೆ ಮುಸ್ಲಿಮರು ಕೇವಲ ಮತಗಳಿಗಾಗಿ ಬೇಕು. ಅವರ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ ಎಂದು ಟೀಕಿಸಿದರು.

ಹುಮಾಯೂನ್ ಕಬೀರ್ ನೇತೃತ್ವದ ಎಜೆಯುಪಿ ಅಭ್ಯರ್ಥಿಗಳ ಪರ ನೌಡಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಬಂಗಾಳದಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಕಾಂಗ್ರೆಸ್, ಎಡರಂಗ ಮತ್ತು ಟಿಎಂಸಿಗೆ ಮತ ನೀಡುತ್ತಾ ಬಂದಿದ್ದಾರೆ. ಆದರೆ ಅವರ ಸ್ಥಿತಿ ಇನ್ನೂ ಹಾಗೆಯೇ ಇರುವುದು ಶೋಚನೀಯ ವಿಚಾರ ಎಂದರು.

ಬಂಗಾಳದಲ್ಲಿ ಮುಸ್ಲಿಮರು ನಿಜವಾದ ಅಭಿವೃದ್ಧಿಗಾಗಿ ನಾವು ಕಬೀರ್ ಅವರೊಂದಿಗೆ ಕೈಜೋಡಿಸಿದ್ದೇವೆ. ನಾವು ಜೊತೆಯಾಗಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಕಠಿಣ ಸ್ಪರ್ಧೆ ನೀಡುತ್ತೇವೆ ಎಂದರು.

ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !