April 7, 2026
Tuesday, April 7, 2026
spot_img

ಮಧ್ಯಪ್ರಾಚ್ಯದ ಸಂಘರ್ಷಕ್ಕೆ ತುತ್ತಾದ ಪಾಕಿಸ್ತಾನ: ಭಾಗಶಃ ಲಾಕ್‌ಡೌನ್‌ ಜಾರಿಗೆ ಮುಂದಾದ ಪಿಎಂ ಷರೀಫ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದರ ನಡುವೆ ಈಗಾಗಲೇ ಆರ್ಥಿಕವಾಗಿ ಏಟು ತಿದ್ದಿರುವ ಪಾಕಿಸ್ತಾನದ ಸ್ಥಿತಿ ಮತ್ತಷ್ಟು ಅದೋಗತಿಯಾಗಿದೆ.

ಈಗಾಗಲೇ ನೀರು ಮತ್ತು ವಿದ್ಯುತ್‌ನಂತಹ ಹಲವು ಕೊರತೆಗಳಿಂದ ಬಳಲುತ್ತಿರುವ ಪಾಕ್ ತೈಲ ಕೊರತೆಯಿಂದಾಗಿ ಸಾಕಷ್ಟು ತೊಂದರೆಗಳು ಎದುರಾಗಿದ್ದು, ಇದರಿಂದಾಗಿ ಗಣರಾಜ್ಯೋತ್ಸವ ಪರೇಡ್‌ ರದ್ದಾಗಿದ್ದು, ಭಾಗಶಃ ಲಾಕ್‌ಡೌನ್‌ ನಿಯಮ ಜಾರಿಗೆ ತಂದಿದೆ.

ಏಪ್ರಿಲ್ 7ರಿಂದ ರಾತ್ರಿ 8 ಗಂಟೆಯೊಳಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಟ್​ಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚಲು ಆದೇಶಿಸಿದೆ.

ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗಶಃ ಲಾಕ್‌ಡೌನ್‌ ನಿರ್ಧಾರ ಮಾಡಲಾಗಿದೆ.

ಭಾಗಶಃ ಲಾಕ್‌ಡೌನ್ ನಿಂದ ಮಾರುಕಟ್ಟೆಗಳು ಮತ್ತು ಮಾಲ್‌ಗಳು ರಾತ್ರಿ 8 ಗಂಟೆ, ರೆಸ್ಟೋರೆಂಟ್‌ಗಳು ರಾತ್ರಿ 10 ಗಂಟೆಗೆ ಮತ್ತು ಮದುವೆ ಸಭಾಂಗಣಗಳು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತವೆ ಎಂದು ಪ್ರಧಾನಮಂತ್ರಿ ಕಚೇರಿಯ ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.ಇನ್ನು ಪಾಕಿಸ್ತಾನದಲ್ಲಿ ಶಾಲೆಗಳು ಈಗಾಗಲೇ ಒಂದು ತಿಂಗಳ ಕಾಲ ಬಂದ್ ಆಗಿವೆ.

ಪ್ರಸ್ತುತ, ಪಾಕಿಸ್ತಾನದಲ್ಲಿ ಲೀಟರ್‌ನ ಪೆಟ್ರೋಲ್​ ಬೆಲೆ 458 ರೂ.ಆಗಿದ್ದು,ಭಾರೀ ಆಕ್ರೋಶದ ಬಳಿಕ 378 ರೂ.ಗೆ ಇಳಿಕೆಯಾಗಿದೆ.ಈ ಬಿಕ್ಕಟ್ಟಿಗೆ ಅಂತಾರಾಷ್ಟ್ರೀಯ ಪರಿಸ್ಥಿತಿಯೇ ಪ್ರಮುಖ ಕಾರಣವೆಂದು ಪಾಕ್​ ಹೇಳಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !