ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯಲ್ಲಿ ಬಲೂಚ್ ಲಿಬರೇಶನ್ ಆರ್ಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸುವಂತೆ ಚೀನಾ, ಪಾಕಿಸ್ತಾನ ಭದ್ರತಾ ಮಂಡಳಿಯನ್ನು ಒತ್ತಾಯಿಸಿದೆ. ಆದ್ರೆ ಪಾಕಿಸ್ತಾನ ಮತ್ತು ಚೀನಾ ಪ್ರಯತ್ನವನ್ನು ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ತಡೆದಿವೆ.
ಬಲೂಚ್ ಲಿಬರೇಶನ್ ಆರ್ಮಿ ಮತ್ತು ಅದರ ವಿಂಗ್ ಮಜೀದ್ ಬ್ರಿಗೇಡ್ ಅನ್ನು ಭಯೋತ್ಪಾದಕ ಘಟಕಗಳೆಂದು ಹೆಸರಿಸಬೇಕು ಎಂದು ಆಗ್ರಹಿಸಿದೆ. ಆದರೆ ಇದನ್ನು ಅಮೆರಿಕ ,ಯುಕೆ ಮತ್ತು ಫ್ರಾನ್ಸ್ ನಿರ್ಬಂಧಿಸಿದ್ದು, ಈ ಸಂಘಟನೆಗಳು ಅಲ್ ಖೈದಾ ಮತ್ತು ಐಎಸ್‌ಐಎಲ್‌ನೊಂದಿಗೆ ಸಂಪರ್ಕ ಹೊಂದಿರವುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿವೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮತ್ತು ಅದರ ವಿಂಗ್ ಮಜೀದ್ ಬ್ರಿಗೇಡ್ ಅನ್ನು ಭಯೋತ್ಪಾದಕ ಘಟಕವೆಂದು ಹೆಸರಿಸಲು ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದವು. ಆದರೆ ಇದನ್ನು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್ ನಿರ್ಬಂಧಿಸಿವೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಮಾತನಾಡಿ, ಅಫ್ಘಾನ್ ಆಶ್ರಯ ತಾಣಗಳಿಂದ ಐಎಸ್ಐಎಲ್-ಕೆ, ಅಲ್-ಖೈದಾ, ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ, ಪೂರ್ವ ಟರ್ಕಿಸ್ತಾನ್ ಇಸ್ಲಾಮಿಕ್ ಮೂವ್ಮೆಂಟ್, ಬಿಎಲ್ಎ ಮತ್ತು ಅದರ ಮಜೀದ್ ಬ್ರಿಗೇಡ್ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ 60ಕ್ಕೂ ಹೆಚ್ಚು ಭಯೋತ್ಪಾದಕ ಶಿಬಿರಗಳು ಗಡಿಯಾಚೆಗಿನ ದಾಳಿಗಳನ್ನು ನಡೆಸುತ್ತಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ 1,267 ನಿರ್ಬಂಧಗಳ ಸಮಿತಿ ಪಟ್ಟಿಯಲ್ಲಿ ಬಿಎಲ್ಎ ಮತ್ತು ಮಜೀದ್ ಬ್ರಿಗೇಡ್ ಅನ್ನು ಮನವಿ ಸಲ್ಲಿಸಿವೆ. ಈ ಮೂಲಕ ಅವುಗಳ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಹ್ಮದ್ ತಿಳಿಸಿದ್ದಾರೆ.
ಬಲೋಚಿಸ್ತಾನ್ ಲಿಬರೇಷನ್ ಆರ್ಮಿ (BLA) ಮತ್ತು ಮಜೀದ್ ಬ್ರಿಗೇಡ್ ಸಂಘಟನೆಗಳನ್ನು ವಿದೇಶಿ ಉಗ್ರರ ಸಂಘಟನೆ ಎಂದು ಕಳೆದ ತಿಂಗಳು ಅಮೆರಿಕ ಘೋಷಿಸಿತ್ತು.
ಹಲವಾರು ಭಯೋತ್ಪಾದಕ ದಾಳಿಗಳ ಅನಂತರ 2019 ರಲ್ಲಿ ವಾಷಿಂಗ್ಟನ್ ಬಿಎಲ್ ಎ ಅನ್ನು ಎಸ್ ಡಿಜಿಟಿ ಎಂದು ಗೊತ್ತುಪಡಿಸಿತು. ಅಂದಿನಿಂದ ಮಜೀದ್ ಬ್ರಿಗೇಡ್ ಸೇರಿದಂತೆ ಹೆಚ್ಚುವರಿ ದಾಳಿಗಳಿಗೆ ಗುಂಪು ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ ಎಂದು ವಿದೇಶಾಂಗ ಇಲಾಖೆ ಹೇಳಿತ್ತು.