January18, 2026
Sunday, January 18, 2026
spot_img

ಕಡೆಗೂ ಇಂಡಿಯಾ ಮುಂದೆ ಮಂಡಿಯೂರಿದ ಪಾಕ್: ಕದಿಯೋ ಕೆಲಸ ಯಾಕ್ ಬೇಕಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಸಿಸಿಐ ಮುಂದೆ ಕೊನೆಗೂ ಪಾಕ್‌ ಸಚಿವ, ಎಸಿಸಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಮಂಡಿಯೂರಿದ್ದಾರೆ. ಏಷ್ಯಾ ಕಪ್‌ ಟ್ರೋಫಿಯನ್ನು ಯುಎಇ ಕ್ರಿಕೆಟ್‌ ಮಂಡಳಿಗೆ ವಾಪಸ್‌ ಕೊಟ್ಟಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಭಾರತ ಏಷ್ಯಾ ಕಪ್‌ ಟ್ರೋಪಿ ಜಯಿಸಿತು. ಆದರೆ, ಪಾಕ್‌ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಈ ವೇಳೆ, ಟ್ರೋಫಿ ಕೊಡದೇ ಪಾಕ್‌ ಸಚಿವ ಉದ್ಧಟತನ ತೋರಿದ್ದರು. ಏಷ್ಯಾ ಕಪ್‌ ಟ್ರೋಫಿ ಕಳ್ಳತನ ಮಾಡಿದ್ದಾರೆಂಬ ಅಪವಾದವನ್ನೂ ನಖ್ವಿ ಹೊತ್ತುಕೊಂಡರು. ಅಷ್ಟೇ ಅಲ್ಲದೆ ದರ್ಪದ ಮಾತುಗಳನ್ನು ಆಡಿದ್ದರು.

ನಖ್ವಿ ನಡೆಯನ್ನು ಖಂಡಿಸಿದ ಬಿಸಿಸಿಐ, ಪಾಕ್‌ ಜೊತೆಗೆ ಕ್ರಿಕೆಟ್‌ ಪಂದ್ಯವಾಡುವ ಯಾವ ತಂಡದ ಜೊತೆಗೂ ಭಾರತ ತಂಡ ಆಟವಾಡಲ್ಲ ಎಂದು ಖಡಕ್‌ ಸಂದೇಶ ರವಾನಿಸಿತು. ಬಿಸಿಸಿಐನಿಂದ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಕದ್ದೊಯ್ದಿದ್ದ ಕಪ್‌ನ್ನು ನಖ್ವಿ ಇದೀಗ ಹಿಂದಿರುಗಿಸಿದ್ದಾರೆ.

Must Read

error: Content is protected !!