Friday, October 24, 2025

ಸ್ಪಿನ್ ಮ್ಯಾಜಿಕ್ ಗೆ ಪಾಕ್ ಕಕ್ಕಾಬಿಕ್ಕಿ: ಟೀಂ ಇಂಡಿಯಾ ಗೆಲುವಿಗೆ 147 ರನ್ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಪಿನ್ ಮ್ಯಾಜಿಕ್ ಗೆ ಪಾಕಿಸ್ತಾನ ವಾಶ್ ಔಟ್ ಆಗಿದ್ದು, 146 ರನ್ ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾಗೆ 147 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ ಭಾರತ, ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು. 5 ಬೌಂಡರಿ, ಮೂರು ಸಿಕ್ಸರ್ ಮೂಲಕ 57 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಫರ್ಹಾನ್ ಗೆ ವರುಣ್ ಚಕ್ರವರ್ತಿ ಬ್ರೇಕ್ ನೀಡಿದರು.

ಪರ್ಹಾನ್‌ಗೆ ಉತ್ತಮ ಸಾಥ್ ನೀಡಿದ್ದ ಫಖರ್ ಅಬ್ಬರಿಸಲು ಆರಂಭಿಸಿದ್ದರು. ಆದರೆ ಸೈಮ್ ಆಯೂಬ್ ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಪತನಗೊಂಡಿತ್ತು. ಫಖರ್ ಅರ್ಧಶತಕದ ಸನಿಹದಲ್ಲಿ ವಿಕೆಟ್ ಪತನಗೊಂಡಿತ್ತು. 35 ಎಸೆತದಲ್ಲಿ ಫಖರ್ 46 ರನ್ ಸಿಡಿಸಿ ಔಟಾದರು.

ಬಳಿಕ ಬಂದ ಬ್ಯಾಟ್ಸ್ ಮ್ಯಾನ್ ಗಳು ಒಬ್ಬರ ಹಿಂದೆ ಒಬ್ಬರು ಪೆವಿಯನ್ ನತ್ತ ಸಾಗಿದರು. ಅಂತಿಮವಾಗಿ ಪಾಕಿಸ್ತಾನ 19.1 ಓವರ್‌ನಲ್ಲಿ 146 ರನ್‌ಗೆ ಆಲೌಟ್ ಆಯಿತು.

error: Content is protected !!