Monday, November 3, 2025

ಪಿಂಕ್ ಕಲರ್ ನಲ್ಲಿ ಕಣಕ್ಕಿಳಿಯಲಿರುವ ಪಾಕ್ ತಂಡ: ಜೆರ್ಸಿ ಬಣ್ಣ ಬದಲಾಯಿಸಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಆದರೆ ಈ ಬಾರಿ ಪಾಕಿಸ್ತಾನ್ ತಂಡವು ಕಣಕ್ಕಿಳಿಯುವ ರೀತಿಯಲ್ಲಿ ಒಂದು ವಿಶೇಷತೆಯಿದೆ. ಎಂದಿನ ಹಸಿರು ಜೆರ್ಸಿಯ ಬದಲಿಗೆ, ಪಾಕಿಸ್ತಾನಿ ಆಟಗಾರರು ಪಿಂಕ್ (ಗುಲಾಬಿ) ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದು ಕೇವಲ ವಿನ್ಯಾಸದ ಬದಲಾವಣೆ ಅಲ್ಲ, ಸ್ತನ ಕ್ಯಾನ್ಸರ್ ಜಾಗೃತಿಗೆ ಪಾಕಿಸ್ತಾನ್ ತಂಡ ನೀಡುತ್ತಿರುವ ಬೆಂಬಲದ ಸಂಕೇತವಾಗಿದೆ.

#PINKtober ಅಭಿಯಾನದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಪ್ರಕಾರ, ಪಿಂಕ್ ಜೆರ್ಸಿ ಧರಿಸುವ ಮೂಲಕ ಆಟಗಾರರು ಸ್ತನ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಅದೇ ರೀತಿ ಸೌತ್ ಆಫ್ರಿಕಾ ತಂಡದ ಆಟಗಾರರು ಹಾಗೂ ಪಂದ್ಯಾಧಿಕಾರಿಗಳು ಗುಲಾಬಿ ಬಣ್ಣದ ರಿಬ್ಬನ್ ಧರಿಸಲಿದ್ದಾರೆ ಎಂದು ಪಿಸಿಬಿ ಪ್ರಕಟಿಸಿದೆ. ಈ ಅಭಿಯಾನವು ಮಹಿಳೆಯರ ಆರೋಗ್ಯ ಕಾಳಜಿಯ ಕುರಿತು ಕ್ರೀಡಾಂಗಣದ ಮೂಲಕ ಜನರಿಗೆ ಸಂದೇಶ ನೀಡುವುದೇ ಉದ್ದೇಶವಾಗಿದೆ.

error: Content is protected !!