Wednesday, September 17, 2025

ಇನ್ನೂ ಮೈದಾನಕ್ಕೆ ಬಾರದ ಪಾಕ್ ಟೀಮ್: ಯುಎಇ- ಪಾಕಿಸ್ತಾನ ಮ್ಯಾಚ್ ರದ್ದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ನಲ್ಲಿ ಇಂದು ನಡೆಯಬೇಕಿದ್ದ ಯುಎಇ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇನ್ನೂ ಆರಂಭವಾಗಿಲ್ಲ.

ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಪಂದ್ಯಾವಳಿಯಿಂದ ವಜಾಗೊಳಿಸುವಂತೆ ಈ ಹಿಂದೆ ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಆದರೆ ಐಸಿಸಿ ಮಾತ್ರ ಆ ರೀತಿಯ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನಿರಾಕರಿಸಿತು. ಇದರಿಂದ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆಯಲು ನಿರ್ಧರಿಸಿದೆ ಎಂತಲೂ ವರದಿಯಾಗಿದೆ.

ಇದೀಗ ಯಾವುದಕ್ಕೂ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ 1 ಗಂಟೆ ಸಮಯಾವಕಾಶ ಕೇಳಿದೆ ಎಂದು ವರದಿಯಾಗಿದೆ. ಪೂರ್ವ ನಿಗದಿಯಂತೆ ಇಂದು ರಾತ್ರಿ 8 ಗಂಟೆಗೆ ಪಾಕಿಸ್ತಾನ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ದುಬೈನಲ್ಲಿ ಆಡಬೇಕಿತ್ತು. ಆದಾಗ್ಯೂ ಪಾಕ್ ತಂಡದ ಆಟಗಾರರು ಪಂದ್ಯಕ್ಕೆ ಇನ್ನು ಕೆಲವೇ ನಿಮಿಷಗಳು ಇದ್ದರೂ ಇನ್ನೂ ತನ್ನ ಹೋಟೆಲ್‌ನಲ್ಲಿಯೇ ಇದ್ದಾರೆ. ಹೀಗಾಗಿ ಪಂದ್ಯ ನಡೆಯುತ್ತದೋ, ಇಲ್ಲವೋ ಎಂಬುದು ಮುಂದಿನ 1 ಗಂಟೆಯೊಳಗೆ ತಿಳಿಯಲಿದೆ.

ಇದನ್ನೂ ಓದಿ