ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಶುಕ್ರವಾರ ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು ಭೇಟಿಯಾಗುತ್ತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಗೆ ನುಗ್ಗಿರುವ ಘಟನೆ ನಡೆದಿದೆ. ಈ ಘಟನೆ
ತುರ್ಕಮೆನಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಭೆಯ ನೆಪಥ್ಯದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಇದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
https://x.com/RT_India_news/status/1999448538510688567?ref_src=twsrc%5Etfw%7Ctwcamp%5Etweetembed%7Ctwterm%5E1999452392333726066%7Ctwgr%5E486b7b3c03559d1032189044a6ae510ac3f6efb1%7Ctwcon%5Es3_&ref_url=https%3A%2F%2Fwww.kannadaprabha.com%2Fworld%2F2025%2FDec%2F12%2Fvideo-after-40-minute-wait-pakistan-pm-gatecrashes-putins-closed-door-meeting
ಆದರೆ, ಶಹಬಾಜ್, ಪುಟಿನ್ ಅವರ ಭೇಟಿಯಾಗಿ 40 ನಿಮಿಷಗಳ ಕಾಲ ಕಾದರೂ ಪುಟಿನ್ ಬಂದಿರಲಿಲ್ಲ. ಇದರಿಂದಾಗಿ ಶೆಹಬಾಜ್ ಷರೀಪ್, ಪಕ್ಕದಲ್ಲಿಯೇ ನಡೆಯುತ್ತಿದ್ದ, ಎರ್ಡೋಗನ್ ಹಾಗೂ ಪುಟಿನ್ ಸಭೆಯ ಹಾಲ್‌ಗೆ ಹೋಗಿದ್ದಾರೆ. ಅದಾದ 10 ನಿಮಿಷಗಳ ನಂತರ ಅವರು ಹೊರಟು ಹೋಗಿದ್ದಾರೆ. ಈ ಇಡೀ ಘಟನೆಯ ವೀಡಿಯೊವನ್ನು ವೈರಲ್ ಆಗಿದೆ.
ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ 40 ನಿಮಿಷಗಳ ಕಾಲ ಪಕ್ಕದ ಕೊಠಡಿಯಲ್ಲಿ ಕಾದ ನಂತರ ಷರೀಫ್ ಸ್ವಲ್ಪವಾದರೂ ಮಾತುಕತೆ ನಡೆಸುವ ನಿಟ್ಟಿನಲ್ಲಿ ಪುಟಿನ್ ಹಾಗೂ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಮಾತುಕತೆ ನಡೆಸುತ್ತಿದ್ದ ಕೊಠಡಿಗೆ ತೆರಳಲು ನಿರ್ಧರಿಸಿದ್ದಾರೆ. ಆದರೆ, ಸುಮಾರು 10 ನಿಮಿಷಗಳ ನಂತರ ಆ ಕೊಠಡಿಯಿಂದ ಅವರು ನಿರ್ಗಮಿಸಿದರು ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಪುಟಿನ್ ಭಿಕ್ಷುಕರಿಗಾಗಿ ತನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. “ಟ್ರಂಪ್ ಕೂಡ ಈ ಭಿಕ್ಷುಕರೊಂದಿಗೆ ಹೀಗೆ ಮಾಡ್ತಾರೆ ಎಂದು ಮತ್ತೋರ್ವ ಬಳಕೆದಾರರು ಅಪಹಾಸ್ಯ ಮಾಡಿದ್ದಾರೆ.

